ಮಂಗಳವಾರ, ಸೆಪ್ಟೆಂಬರ್ 17, 2019
24 °C

ಸೈಫ್ ಪಟೌಡಿಯ 10ನೇ ನವಾಬ

Published:
Updated:
ಸೈಫ್ ಪಟೌಡಿಯ 10ನೇ ನವಾಬ

ಪಟೌಡಿ (ಹರಿಯಾಣ) (ಪಿಟಿಐ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಪಟೌಡಿ ರಾಜಮನೆತನದ ಹತ್ತನೇ ನವಾಬ ಆಗಿ ಸೋಮವಾರ ನೇಮಕಗೊಂಡಿದ್ದಾರೆ. ಪಟೌಡಿ ಮನೆತನದ ಪೂರ್ವಿಕರಿಗೆ ಸೇರಿದ ಇಲ್ಲಿನ ಇಬ್ರಾಹಿಂ ಅರಮನೆಯಲ್ಲಿ ನಡೆದ `ಪಗಡಿ~ ಸಮಾರಂಭದಲ್ಲಿ ಅವರಿಗೆ ಕಿರೀಟಧಾರಣೆ ಮಾಡಲಾಯಿತು.52 ಗ್ರಾಮಗಳ ಹಿರಿಯರು ಶ್ವೇತ ವರ್ಣದ ಮುಂಡಾಸನ್ನು ಸೈಫ್‌ಗೆ ತೊಡಿಸಿದರು. ತಾಯಿ ಶರ್ಮಿಳಾ ಟ್ಯಾಗೋರ್, ಸಹೋದರಿಯರಾದ ಸಬಾ ಮತ್ತು ಸೋಹಾ ಜತೆಗೆ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಸೆ. 22ರಂದು ನಿಧನರಾದ ಹಿನ್ನೆಲೆಯಲ್ಲಿ, ಅವರ ಪುತ್ರ ಸೈಫ್ ಅವರಿಗೆ ಈ ಪಟ್ಟ ನೀಡಲಾಗಿದೆ.

 

Post Comments (+)