ಸೈಫ್ ಮದುವೆಗೆ ಜೈಪುರದ ಬೀಡಾ

7

ಸೈಫ್ ಮದುವೆಗೆ ಜೈಪುರದ ಬೀಡಾ

Published:
Updated:
ಸೈಫ್ ಮದುವೆಗೆ ಜೈಪುರದ ಬೀಡಾ

ಸೈಫ್ ಮತ್ತು ಕರೀನಾ ಮದುವೆ ಮುಂಬೈನಲ್ಲಿ ಅ.16ರಂದು ನಡೆಯಲಿದೆ ಎಂಬುದಂತೂ ಖಚಿತಗೊಂಡಿದೆ.

ಜೈಪುರದ `ಅನ್ನು ಮೊಬೈಲ್ ಪಾನ್ ಶಾಪ್~ ಎಂಬ ಮಳಿಗೆಗೆ ಮುಂಬೈ ಮೂಲದ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದು ಸಂಪರ್ಕಿಸಿದೆ.ಈ ಪ್ರತಿಷ್ಠಿತ ಮದುವೆಗೆ ವಿವಿಧ ಬಗೆಯ ರುಚಿಯ ಪಾನ್‌ಗಳನ್ನು ಪೂರೈಸಬೇಕೆಂದು ಕೇಳಿಕೊಂಡಿದೆಯಂತೆ.ಸುದ್ದಿ ಸಂಸ್ಥೆಗೆ ಈ ಪಾನ್ ಭಂಡಾರ್‌ಮಾಲೀಕ ಅನ್ನು ದಾಸ್ವಾನಿ ಈ ಬಗ್ಗೆ ತಿಳಿಸಿದ್ದಾರೆ.

ಮದುವೆಗಾಗಿ ಚಾಕೊಲೇಟ್, ಸ್ಟ್ರಾಬೆರ‌್ರಿ, ಮ್ಯಾಂಗೊ, ಪೈನಾಪಲ್ ಮುಂತಾದ ಸ್ವಾದದ ಪಾನುಗಳನ್ನು ನೀಡಲಾಗುವುದು. ಡಜನ್‌ಗೂ ಮೀರಿದ ರುಚಿಕರ ಪಾನುಗಳನ್ನು, ಚಿನ್ನ ಮತ್ತು ಬೆಳ್ಳಿ ಹಾಳೆಯ ಅಲಂಕಾರದೊಂದಿಗೆ ನೀಡಲಾಗುತ್ತದೆ. ಪ್ಯಾಕೇಜ್‌ಗೆ ಸಾಕಷ್ಟು ಒತ್ತು ನೀಡಲಾಗುತ್ತಿದೆ.

ಒಂದೊಂದು ಪುಟ್ಟ ಪೆಟ್ಟಿಗೆಯಲ್ಲಿ ಐದು ಬಗೆಯ ಪಾನುಗಳನ್ನು ಇರಿಸಲಾಗುವುದು. ಈ ಒಂದು ಪುಟ್ಟ ಪೆಟ್ಟಿಗೆಯ ಬೆಲೆ ಯಾವುದೇ ಹೆಚ್ಚುವರಿ ವೆಚ್ಚ ಸೇರಿಸಿದೆಯೇ 150ರಿಂದ 175 ರೂಪಾಯಿಗಳಷ್ಟಾಗಬಹುದು ಎನ್ನುವುದು ಅಂದಾಜು.12 ಬಗೆಬಗೆಯ ರುಚಿ ಇರುವ 500 ಪಾನುಗಳನ್ನು ಸ್ಯಾಂಪಲ್‌ಗಾಗಿ ಕಳುಹಿಸಲು ಕೋರಲಾಗಿದೆ. ಎಲ್ಲವೂ ಸರಿ ಹೋದರೆ ಪಟೌಡಿ ಮನೆತನದ ಈ ರಾಜಕುಮಾರನ ಮದುವೆಗೆ ಗುಲಾಬಿ ನಗರದಿಂದ ಪಾನುಗಳು ಪೂರೈಕೆಯಾಗಲಿವೆ.ಕಳೆದೊಂದು ವರ್ಷದಿಂದ ಮದುವೆಯ ವಿಷಯದ ಸುದ್ದಿಗಳನ್ನೇ ರಸಗವಳದಂತೆ ಸವಿದ ಅಭಿಮಾನಿಗಳಿಗೆ ಇದೀಗ ಜೈಪುರದ ಬೀಡಾ ಅಂಗಡಿಯೊಂದು ಮದುವೆಯ ದಿನವನ್ನು ಖಚಿತಗೊಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry