ಸೈಬರ್ ಅಪರಾಧಿಗಳಿಗೂ ವಿಶ್ವಕಪ್ ಜ್ವರ

7

ಸೈಬರ್ ಅಪರಾಧಿಗಳಿಗೂ ವಿಶ್ವಕಪ್ ಜ್ವರ

Published:
Updated:

ನವದೆಹಲಿ (ಪಿಟಿಐ): ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಲ್ಲದೇ ಸೈಬರ್ ಅಪರಾಧಿಗಳಿಗೂ ವಿಶ್ವಕಪ್ ಜ್ವರ ತಟ್ಟಿದೆ. ಇದೇ ಸಮಯ ಬಳಸಿಕೊಂಡು ಮುಗ್ಧ ಇಂಟರ್‌ನೆಟ್ ಬಳಕೆದಾರರಿಗೆ ಅವರು ವಿವಿಧ ರೀತಿಯ ಆಮಿಷಗಳನ್ನೊಡ್ಡಿ ವಂಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.ವಿಶ್ವಕಪ್ ಫುಟ್‌ಬಾಲ್ ಮತ್ತು ಒಲಿಂಪಿಕ್ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರು ವಿಶ್ವಕಪ್ ಕ್ರಿಕೆಟ್ ವೀಕ್ಷಿಸುತ್ತಾರೆ. ಪಂದ್ಯ ವೀಕ್ಷಣೆಗೆ ಉಚಿತ ಟಿಕೆಟ್, ಆನ್‌ಲೈನ್‌ನಲ್ಲಿ ಉಚಿತವಾಗಿ ಪಂದ್ಯದ ನೇರಪ್ರಸಾರ ಮತ್ತು ರಜಾ ದಿನ ಕಳೆಯಲು ಪ್ಯಾಕೇಜ್ ಸೇರಿದಂತೆ ವಿವಿಧ ರೀತಿಯ ಆಮಿಷ ಒಡ್ಡಿ ಕ್ರೆಡಿಟ್ ಕಾರ್ಡ್ ನಂಬರ್ ಪಡೆದು ಸಾಧ್ಯವಾದಷ್ಟು ಜನರನ್ನು ಅವರು ವಂಚಿಸುತ್ತಾರೆ ಎಂದು ಮ್ಯಾಕ್‌ಕಫೀ ಲ್ಯಾಬ್ಸ್ ವ್ಯವಸ್ಥಾಪಕ ವಿನೂ ಥಾಮಸ್ ಹೇಳಿದ್ದಾರೆ. ’ಭಾರತದಲ್ಲಿ ಕ್ರಿಕೆಟ್ ಬಗ್ಗೆ ಸಾಕಷ್ಟು ಹುಚ್ಚು ಇದೆ.ಕೆಲಸದ ಕಾರಣ ಸಾಕಷ್ಟು ಜನರಿಗೆ ಪೂರ್ಣ ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗುವುದಿಲ್ಲ. ಹಾಗಾಗಿ ಬಹಳಷ್ಟು ಜನ ಆನ್‌ಲೈನ್‌ನಲ್ಲಿ ಪಂದ್ಯದ ವಿವರ ಪಡೆಯುತ್ತಾರೆ. ವಿಶ್ವಕಪ್ ವೇಳೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಸಂದರ್ಭ ಬಳಸಿಕೊಂಡು ದುಷ್ಕರ್ಮಿಗಳು ಸೈಬರ್ ಅಪರಾಧ ಎಸಗುತ್ತಾರೆ’ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry