ಸೋಮವಾರ, ನವೆಂಬರ್ 18, 2019
20 °C

ಸೈಬರ್ ಗುರುವಿನಿಂದ ತಂತ್ರಜ್ಞಾನ ಪಾಠ

Published:
Updated:

ಖ್ಯಾತ ಕಂಪ್ಯೂಟರ್ ಸೆಕ್ಯುರಿಟಿ ಗುರು ಹಾಗೂ ಸೈಬರ್ ಟೆರರಿಸಂ ತಜ್ಞ ಅಂಕಿತ್ ಫಾಡಿಯಾ ಅವರಿಂದ ಪಾಠ ಕೇಳುವ ಅವಕಾಶ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ವಿದ್ಯಾರ್ಥಿಗಳಿಗೆ ಈಚೆಗೆ ಲಭಿಸಿತ್ತು. ಈ ವೇಳೆ ಅಂಕಿತ್ `ಸೈಬರ್ ಸೆಕ್ಯುರಿಟಿ' ಕುರಿತು ಗೋಷ್ಠಿ ನಡೆಸಿಕೊಟ್ಟರು. ಅಂಕಿತ್ ಫಾಡಿಯಾ ಅವರು ಇಂಟರ್‌ನೆಟ್ ಬಳಕೆಯ ಸುರಕ್ಷತೆ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.ಕಾಲೇಜಿನ 200ಕ್ಕೂ ಅಧಿಕ ವಿದ್ಯಾರ್ಥಿಗಳು ಗೋಷ್ಠಿಯ ಪ್ರಯೋಜನ ಪಡೆದುಕೊಂಡರು. ಐಪಿ ವಿಳಾಸ ಹಾಗೂ ಸಿಸ್ಟಂಗಳ ಪಾಸ್‌ವರ್ಡ್‌ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಅದನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಉಪಯೋಗಿಸುವ ವಿವಿಧ ಅಪ್ಲಿಕೇಷನ್‌ಗಳ ಬಗ್ಗೆ ಪ್ರದರ್ಶನ ನೀಡಿದರು. ವಿವಿಧ ಬಗೆಯ ವೈರಸ್‌ಗಳು ಹಾಗೂ ಟ್ರೋಜಾನ್‌ಗಳು ಸಿಸ್ಟಂ ಅನ್ನು ದಾಳಿ ಮಾಡಿದಾಗ ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಅವರು ಮಾಹಿತಿ ಒದಗಿಸಿದರು. ಹ್ಯಾಕಿಂಗ್ ಹಾಗೂ ಸೈಬರ್ ಸೆಕ್ಯುರಿಟಿ ವಿಷಯದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ನೈತಿಕ ಹ್ಯಾಕಿಂಗ್‌ನ ಅವಶ್ಯಕತೆ ಬಗ್ಗೆ ಒತ್ತಿ ಹೇಳಿದ ಅಂಕಿತ್ ಫಾಡಿಯಾ, ಇದನ್ನು ವೃತ್ತಿಯಾಗಿ ಪರಿಗಣಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಂತ್ರಜ್ಞಾನದ ಅಭಿವೃದ್ಧಿ ಮನುಷ್ಯನಿಗೆ ಎಷ್ಟು ಉಪಯೋಗ ಮತ್ತು ಅನುಕೂಲಗಳನ್ನು ಒದಗಿಸಿದೆ. ಆದರೆ, ಅದೇ ತಂತ್ರಜ್ಞಾನ ಸಮಾಜಕ್ಕೆ ಹೆಚ್ಚಿನ ಕೆಡುಕನ್ನು ಉಂಟು ಮಾಡುವ ಭಯವನ್ನೂ ಒಡ್ಡಿದೆ. ತಂತ್ರಜ್ಞಾನ ಗರಿಷ್ಟ ಪ್ರಮಾಣದಲ್ಲಿ ಒಳ್ಳೆಯ ಕೆಲಸಗಳಿಗೆ ಉಪಯೋಗವಾಗಲಿ ಎಂಬ ಕಾರಣದಿಂದ, ಸೈಬರ್ ಸವಾಲುಗಳ ಕುರಿತಂತೆ ಎಲ್ಲ ವಿದ್ಯಾರ್ಥಿಗಳು ಅರಿವು ಹೊಂದಬೇಕು. ಅಂತರ್ಜಾಲ ತಾಣಗಳನ್ನು ಹೆಚ್ಚಿನ ಜವಾಬ್ದಾರಿಯಿಂದ ಉಪಯೋಗಿಸುವಂತೆ ಈ ಸಂದರ್ಭದಲ್ಲಿ ಅವರು ಯುವ ಸಮುದಾಯಕ್ಕೆ ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)