ಶುಕ್ರವಾರ, ಏಪ್ರಿಲ್ 16, 2021
22 °C

ಸೈಬರ್ ಬೇಹುಗಾರಿಕೆಗೆ ಅಗ್ಗದ ತಂತ್ರ: ಜೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಸೈಬರ್ ಬೇಹುಗಾರಿಕೆ ನಡೆಸುವ ಉದ್ದೇಶದಿಂದ ಕೆಲವು ದೇಶಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಿ, ತಯಾರಿಕಾ ವೆಚ್ಚಕ್ಕಿಂತಲೂ ಅಗ್ಗದ ದರದಲ್ಲಿ ವಿದೇಶಗಳಿಗೆ ರಫ್ತು ಮಾಡುತ್ತಿವೆ. ಇದಕ್ಕಾಗಿ ದೇಶೀಯ ಕಂಪೆನಿಗಳಿಗೆ ದೊಡ್ಡ ಪ್ರಮಾಣ ಸಬ್ಸಿಡಿ ಆಮಿಷ ಒಡ್ಡಲಾಗುತ್ತಿದೆ~ ಎಂದು ಐ.ಟಿ. ಭದ್ರತಾ ತಜ್ಞ ಜಿತಿನ್ ಜೈನ್ ಇಲ್ಲಿ ನಡೆದ `ಹ್ಯಾಕರ್‌ಗಳ ಸಮ್ಮೇಳನ~ವೊಂದರಲ್ಲಿ ಆರೋಪಿಸಿದ್ದಾರೆ.ಸಾಮಾನ್ಯವಾಗಿ ಶತ್ರು ದೇಶದ ಮೇಲೆ ದಾಳಿ ನಡೆಸಲು ಇಂತಹ ತಂತ್ರ ಅನುಸರಿಸಲಾಗುತ್ತದೆ. ಆದರೆ, ಇತ್ತೀಚೆಗೆ ಈ ಪ್ರವೃತ್ತಿ ಪರಸ್ಪರ ಸ್ನೇಹದಿಂದ ಇರುವ ದೇಶಗಳ ನಡುವೆಯೂ ನಡೆಯುತ್ತಿವೆ.ಸ್ಥಳೀಯವಾಗಿಯೇ ಇಂತಹ ಹ್ಯಾಕಿಂಗ್ ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.ದೂರಸಂಪರ್ಕ ಜಾಲ ಮತ್ತು  ಸ್ಮಾರ್ಟ್ ಫೋನ್‌ಗಳಲ್ಲಿ ಈ ತಂತ್ರ ಬಳಸಿ `ಮಾಲ್ ವೇರ್~ ಹರಿಬಿಡಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.