ಸೈಬರ್ ಭದ್ರತೆ ಎಷ್ಟು ಸುರಕ್ಷಿತ?

ಭಾನುವಾರ, ಮೇ 26, 2019
30 °C

ಸೈಬರ್ ಭದ್ರತೆ ಎಷ್ಟು ಸುರಕ್ಷಿತ?

Published:
Updated:

ಸೈಬರ್‌ಅಪರಾಧಗಳಿಂದ ಆನ್‌ಲೈನ್ ಬಳಕೆದಾರರು 2010ರಲ್ಲಿ 388 ಶತಕೋಟಿ ಡಾಲರ್‌ಗಳಷ್ಟು (ಅಂದಾಜು ರೂ.17,46,000 ಕೋಟಿ) ಹಣ ಕಳೆದುಕೊಂಡಿದ್ದಾರೆ.ವಿಶ್ವ ಮಾದಕ ವಸ್ತುಗಳ ವಹಿವಾಟಿನ ಮೊತ್ತವು  ಸೈಬರ್ ಅಪರಾಧಗಳಿಂದ ಕಳೆದುಕೊಂಡ ಮೊತ್ತಕ್ಕಿಂತ ಕಡಿಮೆ ಇದೆ ಎಂದರೆ ನೀವು ನಂಬಲೇಬೇಕು!.

`ಸಿಮ್ಯಾಂಟೆಕ್~ ನಡೆಸಿದ ಸಮೀಕ್ಷೆಯಲ್ಲಿ ಸೈಬರ್ ಅಪರಾಧದ ಈ ಸತ್ಯಗಳು ಗೊತ್ತಾಗಿವೆ.ಆ್ಯಂಟಿ ವೈರಸ್, ಆ್ಯಂಟಿ ಸ್ಪೈವೇರ್ ಮತ್ತು ಫಿಶಿಂಗ್‌ಗೆ ಭದ್ರತೆ ನೀಡುವ ಉತ್ಪನ್ನ ತಯಾರಿಸುವ ನಾರ್ಟನ್, ಆನ್‌ಲೈನ್ ಬ್ಯಾಕ್‌ಅಪ್, ಪಿಸಿ ಟ್ಯೂನ್ ಅಪ್ ಮತ್ತು ಆನ್‌ಲೈನ್ ಭದ್ರತೆಯನ್ನೂ ಒದಗಿಸುತ್ತಿದೆ.ಭಾರತ, ಆಸ್ಟ್ರೇಲಿಯಾ, ಚೀನಾ, ಜರ್ಮನಿ, ಬ್ರೆಜಿಲ್, ಸ್ಪೇನ್, ಸ್ವೀಡನ್, ಇಂಗ್ಲೆಂಡ್, ಬೆಲ್ಜಿಯಂ, ಡೆನ್ಮಾರ್ಕ್, ಹಾಲೆಂಡ್, ಹಾಂಕಾಂಗ್, ಮೆಕ್ಸಿಕೊ, ಸಿಂಗಪುರ, ದಕ್ಷಿಣ ಆಫ್ರಿಕಾ, ಪೋಲೆಂಡ್, ಯುಎಇ ರಾಷ್ಟ್ರಗಳಲ್ಲಿ 2011ರ ಫೆ 6ರಿಂದ ಮಾರ್ಚ್ 14ರ ಮಧ್ಯೆ ಈ ಸಮೀಕ್ಷೆ ನಡೆಸಲಾಗಿದೆ.ಮಾದಕ ವಸ್ತುಗಳ ಕಳೆದ ವರ್ಷದ ಜಾಗತಿಕ ವಹಿವಾಟು ಒಟ್ಟು 288 ಶತಕೋಟಿ ಡಾಲರ್. ಅಂದರೆ ನೂರು ಕೋಟಿ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಜನರು ಸೈಬರ್ ಅಪರಾಧದಲ್ಲಿ ಕಳೆದುಕೊಂಡಿದ್ದಾರೆ. ಸೈಬರ್ ವಂಚಕರ ಜಾಲ ಮಿತಿ ಮೀರಿ ಬೆಳೆಯುತ್ತಿರುವುದೇ ಇದಕ್ಕೆಲ್ಲ ಕಾರಣ.ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿದೆ. ಅಂತೆಯೇ ಸೈಬರ್ ಅಪರಾಧಕ್ಕೆ ತುತ್ತಾಗುತ್ತಿರುವವರ ಸಂಖ್ಯೆಯೂ ದಿಗ್ಭ್ರಮೆ ಮೂಡಿಸುವಂತಿದೆ. 2010ರಲ್ಲಿ 29.9 ದಶಲಕ್ಷ ಭಾರತೀಯರು ಇಂಟರ್‌ನೆಟ್ ಅಪರಾಧಕ್ಕೆ ತುತ್ತಾಗಿದ್ದಾರೆ.

 

ನಾಲ್ಕು ಶತಕೋಟಿ ಡಾಲರ್ ಹಣವನ್ನು ನಮ್ಮವರು ಕಳೆದುಕೊಂಡಿದ್ದಾರೆ. ಈ ಪ್ರಕರಣಗಳ ತನಿಖೆಗೆ ವ್ಯಯಿಸಿದ ಸಮಯವನ್ನು ಲೆಕ್ಕ ಹಾಕಿದರೆ ನಷ್ಟದ ಪ್ರಮಾಣ 3.6 ಶತಕೋಟಿ ಡಾಲರ್ ಹೆಚ್ಚುತ್ತದೆ.ಇದು ಅಚ್ಚರಿ ಎನಿಸಿದರೂ ಸತ್ಯ. ಇಂಟರ್‌ನೆಟ್ ಬಳಸುವ ಪ್ರತಿ ಐದು ಮಂದಿಯಲ್ಲಿ ನಾಲ್ಕು ಮಂದಿ ವಂಚನೆಯ ಜಾಲಕ್ಕೆ ತುತ್ತಾಗುತ್ತಿದ್ದಾರೆ. ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಬಳಸುವ ಒಟ್ಟು ಜನರಲ್ಲಿ ಶೇ 17ಮಂದಿಗೆ ಅಪರಾಧದ ಬಿಸಿ ತಟ್ಟಿದೆ.ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸುವವರ ಸಂಖ್ಯೆ ತೀವ್ರ ಗತಿಯಲ್ಲಿ ಏರುತ್ತಿದೆ. ಅಂದರೆ ಮೋಸದ ಪ್ರಮಾಣ ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತದೆ ಕಂಪ್ಯೂಟರ್ ಸುರಕ್ಷತಾ ತಂತ್ರಾಂಶಗಳನ್ನು ಪೂರೈಸುವ ಸಿಮ್ಯಾಟೆಂಕ್ ಕಂಪೆನಿ.`ಸೈಬರ್ ಕ್ರೈಂ~ ಪ್ರಮಾಣ ಏರು ಗತಿಯಲ್ಲಿ ಇರಲು ಪ್ರಮುಖ ಕಾರಣ ಎಂದರೆ ಅಲಕ್ಷ್ಯ. ಸಮೀಕ್ಷೆಯ ಪ್ರಕಾರ ಶೇ 74ರಷ್ಟು ಮಂದಿಗೆ ಸೈಬರ್ ಕೃತ್ಯಗಳ ಬಗ್ಗೆ ಮಾಹಿತಿ ಇರುತ್ತದೆ. ಆದರೆ, ಅವರ‌್ಯಾರು ಮುಂಜಾಗ್ರತಾ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಅಚ್ಚರಿಯ ಸಂಗತಿ.ವಂಚನೆ ಎಂದರೆ ಹಣವನ್ನೇ ಕಳೆದುಕೊಳ್ಳಬೇಕಿಲ್ಲ. ಮಾಹಿತಿ, ವೈಯಕ್ತಿಕ ಮಾಹಿತಿ, ಭಾವಚಿತ್ರ ಮುಂತಾದವುಗಳನ್ನು ದುಷ್ಕರ್ಮಿಗಳು ಕದಿಯಬಹುದು ಅಥವಾ ಅದನ್ನು ನಾಶಪಡಿಸಬಹುದು. ಆದರೆ, ಈ ಬಗ್ಗೆಯೂ ಹೆಚ್ಚಿನವರು ಎಚ್ಚರಿಕೆ ವಹಿಸುತ್ತಿಲ್ಲ.ಇಂಟರ್‌ನೆಟ್ ಬಳಕೆದಾರರಲ್ಲಿ ಶೇ 41ರಷ್ಟು ಮಂದಿ ವೈಯಕ್ತಿಕ ಮಾಹಿತಿ ರಕ್ಷಣೆಗೆ ಅಗತ್ಯವಿರುವ ಸಾಫ್ಟ್‌ವೇರ್ ಬಳಸುತ್ತಿಲ್ಲ. ಕಿಡಿಗೇಡಿಗಳಿಗೆ ಇದೇ ವರವಾಗಿ ಪರಿಣಮಿಸಿದ್ದು, `ಇ-ಮೇಲ್ ಹ್ಯಾಕ್~ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಆನ್‌ಲೈನ್‌ನಲ್ಲಿ ವಂಚನೆಗೊಳಗಾದವರಲ್ಲಿ ಭಾರತೀಯರು ಮುಂದಿದ್ದಾರೆ. ಶೇ 80ರಷ್ಟು ವಯಸ್ಕರು (ಇಂಟರ್‌ನೆಟ್ ಬಳಕೆದಾರರು) ಆನ್‌ಲೈನ್‌ನ ಅಪರಾಧಕ್ಕೆ ಗುರಿಯಾಗಿದ್ದಾರೆ.ವಿಶ್ವದಲ್ಲಿ ಇದರ ಪ್ರಮಾಣ ಶೇ 69ರಷ್ಟಿದೆ. ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸುತ್ತ ವ್ಯಾಪಾರ, ವ್ಯವಹಾರ ಮಾಡುವ ಮತ್ತು ವೈಯಕ್ತಿಕ ಕೆಲಸ ಮಾಡುವ ಶೇ 17 ಮಂದಿಗೆ ಸೈಬರ್ ಅಪರಾಧದ ಬಿಸಿ ತಟ್ಟಿದ್ದರೆ, ವಿಶ್ವದಲ್ಲಿ ಇದರ ಪ್ರಮಾಣ ಶೇ 10ರಷ್ಟಿದೆ.ಅಂದರೆ, ಸೈಬರ್ ಅಪರಾಧ ತಡೆಯುವಲ್ಲಿ ಭಾರತೀಯರು ಹಿಂದಿದ್ದಾರೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ. ಅಪರಾಧ ಪತ್ತೆಯಲ್ಲಿ ನಾವು ಬಹಳ ಹಿಂದಿದ್ದೇವೆ. ಪ್ರಕರಣವೊಂದನ್ನು ಭೇದಿಸಲು ನಮ್ಮ ಭದ್ರತಾ ಸಿಬ್ಬಂದಿ ಸರಾಸರಿ ಹದಿನೈದು ದಿನ ವ್ಯಯಿಸಿದರೆ ವಿದೇಶದಲ್ಲಿ ಹತ್ತೇ ದಿನಕ್ಕೆ ಪ್ರಕರಣದ ಪತ್ತೆ ಸಾಧ್ಯವಾಗುತ್ತಿದೆ.ಒಟ್ಟು ಅಪರಾಧಗಳಲ್ಲಿ ಕಂಪ್ಯೂಟರ್ ವೈರಸ್ ದಾಳಿ ಮತ್ತು ನಕಲಿ ಮಾಡುವುದು ಸಾಮಾನ್ಯ ಅಪರಾಧವಾಗಿದೆ (ಭಾರತದಲ್ಲಿ). ಒಟ್ಟು ಅಪರಾಧ ಶೇ 60ರಷ್ಟಿದ್ದರೆ ಕಳೆದ ಹನ್ನೆರಡು ತಿಂಗಳಲ್ಲಿ ಒಟ್ಟು ಶೇ 75ರಷ್ಟು ಈ ಕೃತ್ಯ ನಡೆದಿದೆ.

 

ಆನ್‌ಲೈನ್ ಹಗರಣಗಳ ಪ್ರಮಾಣ ಒಟ್ಟು ಶೇ 20ರಷ್ಟಿದ್ದರೆ, ಹನ್ನೆರಡು ತಿಂಗಳಲ್ಲಿ ಶೇ 48ರಷ್ಟು ನಡೆದಿದೆ. ಫಿಶಿಂಗ್ ಪ್ರಮಾಣ ಒಟ್ಟು ಶೇ 19ರಷ್ಟು ಮತ್ತು ಹನ್ನೆರಡು ತಿಂಗಳಲ್ಲಿ 59ರಷ್ಟಿದೆ. ವಿಶ್ವದಲ್ಲಿ ಇದರ ಪ್ರಮಾಣ ಕ್ರಮವಾಗಿ ಶೇ 54, ಶೇ 58, ಶೇ 11, ಶೇ 52, ಶೇ10 ಮತ್ತು 53ರಷ್ಟಿದೆ.ದೇಶದಲ್ಲಿ ಇಂಟರ್‌ನೆಟ್ ಬಳಕೆ ಪ್ರಮಾಣ ಏರುತ್ತ್ದ್ದಿದು ಜನರು ವಾರಕ್ಕೆ ಸರಾಸರಿ ಮೂವತ್ತು ಗಂಟೆಗಳ ಕಾಲ ಇಂಟರ್‌ನೆಟ್ ಬಳಸುತ್ತಿದ್ದಾರೆ. ಇದು ಜಾಗತಿಕ ಇಂಟರ್‌ನೆಟ್ ಬಳಕೆಗಿಂತ ಹೆಚ್ಚು. ಇಂಟರ್‌ನೆಟ್ ಬಳಕೆಯ ವಿಶ್ವದ ಸರಾಸರಿ 24 ಗಂಟೆ ಇದೆ.ಮೊಬೈಲ್ ಹೊಂದಿರುವ ಒಟ್ಟು ಭಾರತೀಯರಲ್ಲಿ ಶೇ 59ರಷ್ಟು ಮಂದಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದರೆ, ವಿಶ್ವದ ಶೇ 44ರಷ್ಟು ಮೊಬೈಲ್ ಬಳಕೆದಾರರು ಮೊಬೈಲ್‌ನಲ್ಲಿ ನೆಟ್ ಬಳಸುತ್ತಿದ್ದಾರೆ. ಇಂಟರ್‌ನೆಟ್ ಇಲ್ಲದೆ ಇರಲಾಗದು ಎಂದು ಶೇ 32ರಷ್ಟು ಮಂದಿ ಹೇಳುತ್ತಾರೆ.ಶೇ 47ರಷ್ಟು ಜನರು ಇಂಟರ್‌ನೆಟ್ ಸಂಪರ್ಕ ಇಲ್ಲದಿದ್ದರೆ ನಾವು ಸ್ನೇಹಿತರನ್ನೂ ಕಳೆದುಕೊಳ್ಳುತ್ತೇವೆ ಎಂದು  ಸಿಮ್ಯಾಂಟೆಕ್‌ನ  ಮಾರುಕಟ್ಟೆ ಅಧಿಕಾರಿ ಗೌರವ್ ಕನ್ವಾಲ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry