ಸೈಬರ್ ಭದ್ರತೆ ನೀತಿ ಅನಾವರಣ

ಶುಕ್ರವಾರ, ಜೂಲೈ 19, 2019
22 °C

ಸೈಬರ್ ಭದ್ರತೆ ನೀತಿ ಅನಾವರಣ

Published:
Updated:

ನವದೆಹಲಿ (ಐಎಎನ್‌ಎಸ್): ಕೇಂದ್ರ ಸರ್ಕಾರವು ಮಂಗಳವಾರ 2013ರ ಸೈಬರ್ ಭದ್ರತಾ ನೀತಿ ಅನಾವರಣಗೊಳಿಸಿದೆ.

ಅಂತರ್ಜಾಲದ ಮೂಲಕ ಅಮೆರಿಕ ರಹಸ್ಯವಾಗಿ ಮಾಹಿತಿ ಸಂಗ್ರಹಿಸಿರುವುದು ಬಯಲಾಗಿರುವ ಬೆನ್ನಲ್ಲಿಯೇ ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ.2011ರಲ್ಲಿ ದೇಶದಲ್ಲಿ 13,000 ಸೈಬರ್ ದಾಳಿ ಪ್ರಕರಣಗಳು ವರದಿಯಾಗಿವೆ.ಈ ನೀತಿಯ ಅಗತ್ಯ ತಿಳಿಸಿರುವ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್, ` ಒಳಗಿನಿಂದ ಹಾಗೂ ಹೊರಗಿನಿಂದ ಸೈಬರ್ ಭದ್ರತೆಗೆ ಆತಂಕ ಎದುರಾಗುವ ಸಂದರ್ಭಗಳು ಇರುತ್ತವೆ. ಈ ಬಗ್ಗೆ ಮಾಹಿತಿ ಪಡೆಯಲು ಕಾರ್ಯತಂತ್ರ ರೂಪಿಸುವುದು ನಮ್ಮ  ಉದ್ದೇಶವಾಗಿದೆ' ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry