ಭಾನುವಾರ, ಮೇ 16, 2021
22 °C

ಸೈಬರ್ ಲೋಕದ ಸುರಕ್ಷತೆ: ಸಚಿವ ಆಂಟನಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಆಘ್ಘಾನಿಸ್ತಾನ- ಪಾಕಿಸ್ತಾನ ವಲಯದಲ್ಲಿನ ಬೆಳವಣಿಗೆ, ಚೀನಾ ಪೈಪೋಟಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದನೆ ನಮ್ಮ  ಮುಂದಿರುವ ಸವಾಲುಗಳು~ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದರು.ಮೂರೂ ಸೇನಾಪಡೆಗಳ ಉನ್ನತ ಕಮಾಂಡರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸೈಬರ್ ಭದ್ರತಾ ಅಪಾಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿರ್ದಿಷ್ಟ ಕಾರ್ಯನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.ಆಫ್ಘಾನಿಸ್ತಾನ- ಪಾಕ್ ವಲಯದಲ್ಲಾಗುವ ಯಾವುದೇ ಬದಲಾವಣೆ ಭಾರತದ ಕಾರ್ಯತಂತ್ರ ಹಾಗೂ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಲ್ಲಿನ ವಿದ್ಯಮಾನಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದು ಅಗತ್ಯವೆಂದು ಆಂಟನಿ ಅವರು ಕಮಾಂಡರ್‌ಗಳಿಗೆ ಸೂಚಿಸಿದರು.ಚೀನಾವು ಆರ್ಥಿಕವಾಗಿ ಹಾಗೂ ಸೇನಾ ಸಶಕ್ತ ರಾಷ್ಟ್ರವಾಗಿ ಬೆಳೆಯುತ್ತಿರುವ ಜತೆಗೆ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ. ಇದು ಕೂಡ ಭಾರತದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು

.

 ಭಾರತ ಮತ್ತು ಜಪಾನ್ ವಿರುದ್ಧ ಚೀನಾ ಮಾಡುತ್ತಿರುವ ಕಾರ್ಯತಂತ್ರ ಪೈಪೋಟಿಯು ಏಷ್ಯಾದ ಭದ್ರತೆಯ ಮೇಲೆ ನಿಶ್ಚಿತವಾಗಿಯೂ ಅಡ್ಡಪರಿಣಾಮ ಬೀರುತ್ತದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.