ಮಂಗಳವಾರ, ನವೆಂಬರ್ 12, 2019
28 °C
ನಟಿ ಶ್ರುತಿಯಿಂದ ಮತ ಯಾಚನೆ

ಸೈಯದ್ ನಾಮಪತ್ರ ಸಲ್ಲಿಕೆ ಇಂದು

Published:
Updated:

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸೈಯದ್ ಏ.17ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲದೇ, ಸೈಯದ್ ಪರ ಮತ ಯಾಚನೆಗಾಗಿ ಅಂದು ಪಕ್ಷದ ನಾಯಕಿ ಹಾಗೂ ಚಿತ್ರನಟಿ ಶ್ರುತಿ ನಗರಕ್ಕೆ ಆಗಮಿಸಲಿದ್ದಾರೆ.ನಗರದಲ್ಲಿ ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಸಿರಸಪ್ಪಯ್ಯನಮಠದಿಂದ ಪಕ್ಷದ ಅಭಿಮನಿಗಳು ಹಾಗೂ ಕಾರ್ಯಕರ್ತರೊಂದಿಗೆ ಗಡಿಯಾರ ಕಂಬ, ಅಶೋಕ ವೃತ್ತ ಮಾರ್ಗವಾಗಿ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.ತಮಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿಗಳು. ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಮೆಚ್ಚಿ ಸಾಕಷ್ಟು ಸಂಖ್ಯೆಯ ಕೆಜೆಪಿಯನ್ನು ಸೇರುತ್ತಿದ್ದಾರೆ. ಜನರ ಪ್ರತಿಕ್ರಿಯೆ ಸಹ ಉತ್ತಮವಾಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಜ್ಯೋತಿಷಿಗಳ ಮಾತು ಕೇಳಿ ಬಿಎಸ್‌ಆರ್ ಕಾಂಗ್ರೆಸ್ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಎಸ್‌ಅರ್‌ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದರೂ ಟಿಕೆಟ್ ಸಿಗಲಿಲ್ಲ ಎಂದರು. ಟಿಕೆಟ್ ಕೊಡುತ್ತೇವೆ ಎಂದು ಹೇಳುತ್ತ ಬಂದ ಶ್ರೀರಾಮುಲು ಕೊನೆ ಗಳಿಗೆಯಲ್ಲಿ ಟಿಕೆಟ್ ಬೇರೆಯವರಿಗೆ ಕೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಪಕ್ಷ ಬಿಡಬೇಕಾಯಿತು ಎಂದು ತಮ್ಮ ಮೇಲಿನ ಆರೋಪಕ್ಕೆ ತಿರುಗೇಟು ನೀಡಿದರು.ಪ್ರಚಾರ: ಪಕ್ಷದ ನಾಯಕಿ ಹಾಗೂ ಚಿತ್ರನಟಿ ಶ್ರುತಿ ಅವರು ಏ. 17ರಂದು ನಗರಕ್ಕೆ ಆಗಮಿಸಿ, ತಮ್ಮ ಪ್ರಚಾರ ಕೈಗೊಳ್ಳುವರು. ಕ್ಷೇತ್ರದಲ್ಲಿ ಎರಡು ಕಡೆಗಳಲ್ಲಿ ಸಭೆ ನಡೆಸುವ ಅವರು, ಕಾರ್ಯಕರ್ತರೊಂದಿಗೂ ಚರ್ಚೆ ನಡೆಸುವರು ಎಂದು ಹೇಳಿದರು.ಪಕ್ಷದ ಮುಖಂಡರಾದ ಪ್ರಫುಲ್ಲಗೌಡ ಹುರಕಡ್ಲಿ, ಪ್ರಭಾಕರ ಬಡಿಗೇರ, ಶಾಮೀದ ಅಲಿ ಕಿಲ್ಲೆೀದಾರ, ಲಕ್ಷ್ಮಣ ಗುಡಿ ಇದ್ದರು.

ಪ್ರತಿಕ್ರಿಯಿಸಿ (+)