ಶನಿವಾರ, ಮೇ 8, 2021
26 °C

ಸೈಲೆನ್ಸ್ನಲ್ಲಿ ಬೀದರ್ ಬಾಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕಳೆದ ಶುಕ್ರವಾರ ತೆರೆ ಕಂಡಿರುವ ಕನ್ನಡ ಚಲನಚಿತ್ರ `ಸೈಲೆನ್ಸ್~ನಲ್ಲಿ ಜಿಲ್ಲೆಯ ಬಾಲೆಯೊಬ್ಬಳು ಬಣ್ಣ ಹಚ್ಚುವ ಮೂಲಕ ಗಮನ ಸೆಳೆದಿದ್ದಾಳೆ.`ಸಾಂಡಲ್‌ವುಡ್~ನಲ್ಲಿ ನಟಿಸಿ ಸದ್ಯ ಜಿಲ್ಲೆಯಲ್ಲಿ ಸುದ್ದಿಯಾದವರು ಔರಾದ್ ತಾಲ್ಲೂಕಿನ ವಡಗಾಂವ್ (ಡಿ) ಗ್ರಾಮದ ಸುರೇಖಾ ಪಲ್ಲವಿ. ಸುರೇಖಾ ಈಗಾಗಲೇ ತೆಲಗು ಮತ್ತು ತಮೀಳು ಚಿತ್ರಗಳಲ್ಲಿಯು ಅವಕಾಶ ಗಿಟ್ಟಿಸಿ ತಮ್ಮ ಪ್ರತಿಭೆ ಸಾಬೀತುಪಡಿಸಿರುವುದು ವಿಶೇಷ.ಬಡ ಕುಟುಂಬದಲ್ಲಿ ಜನಿಸಿದ ಈಕೆ ಓದಿದ್ದು ಬೀದರ್‌ನ ಎನ್‌ಎಫ್‌ಎಚ್‌ಎಸ್ ಕಾಲೇಜಿನಲ್ಲಿ. ಬಾಲ್ಯದಲ್ಲಿ ನೃತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೊಂದಿದ್ದ ಆಸಕ್ತಿಯೇ ಈಕೆಯನ್ನು ಬೆಳ್ಳಿ ಪರದೆಯವರೆಗೆ ತಂದು ನಿಲ್ಲಿಸಿದೆ.ಕಳೆದ ಆರು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನಟಿಸಿರುವ ತೆಲುಗಿನ `ಶಬ್ದಂ~ ಮತ್ತು `ಸತ್ಯ~ ಚಿತ್ರಗಳು ಚಿತ್ರರಸಿಕರ ಮನ ಗೆದ್ದಿವೆ. `ಸೈಲೆನ್ಸ್~ ನನ್ನ ಮೊಲದ ಕನ್ನಡ ಚಿತ್ರವಾಗಿದೆ ಎಂದು ಸುರೇಖಾ ಪಲ್ಲವಿ ಭಾನುವಾರ ಪತ್ರಕರ್ತರಿಗೆ ತಿಳಿಸಿದರು.ನನ್ನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದವರು ಸ್ಟಿಲ್ ಫೋಟೋಗ್ರಾಫರ್ ಪ್ರವೀಣ ನಾಯಕ್. ವೇಣುಗೋಪಾಲ್ ಅವರ ನಿರ್ದೇಶನದ ಕನ್ನಡದ `ಸೈಲೆನ್ಸ್~ ಚಿತ್ರಕ್ಕಾಗಿ 57 ಬಾಲೆಯರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಕೊನೆಗೆ ನನಗೆ ಅವಕಾಶ ದೊರಕಿತು. ಚಿತ್ರದಲ್ಲಿ ನಾನು `ಲಕ್ಷ್ಮಿ~ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಪ್ರೇಕ್ಷಕರು ನನ್ನ ಪಾತ್ರವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ನುಡಿದರು.ಬರುವ ದಿನಗಳಲ್ಲಿ ಕನ್ನಡದ ಇನ್ನೊಂದು ಚಿತ್ರ `ನಟರಂಗ~ದಲ್ಲಿ ನಟಿಸುವ ಸಿದ್ಧತೆ ನಡೆದಿದೆ. ಮೂರ‌್ನಾಲು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು. ಸುರೇಖಾ  ಈಗ ಮಾಡಲಿಂಗ್ ಲೋಕದತ್ತಲೂ ದೃಷ್ಟಿ ಹರಿಸಿದ್ದಾರೆ. ಮುಂಬೈನಲ್ಲಿ ಉಳಿದುಕೊಂಡು ಅವಕಾಶ ಬಳಸಿಕೊಳ್ಳಲು ಮುಂದಾಗಿದ್ದಾರೆ.ಆಕೆ ತನಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಅದರಲ್ಲಿ ಯಶ ಕೂಡ ಕಾಣುತ್ತಿದ್ದಾಳೆ. ಚಿತ್ರರಂಗದ ಬಗೆಗಿನ ಆಕೆಯ ಆಸಕ್ತಿಗೆ ನಮ್ಮ ಸಹಮತ ಇದೆ ಎಂದು ಅವರ ತಂದೆ ಭಾಸ್ಕರ್ ಮತ್ತು ತಾಯಿ ಸಂತೋಷಮ್ಮ ತಿಳಿಸಿದರು.ತಮ್ಮ ಕಾಲೇಜಿನಲ್ಲಿ ಓದಿದ ಹುಡುಗಿ ಚಿತ್ರರಂಗದ ಮೂಲಕ ಹೆಸರು ಮಾಡಿದ್ದಕ್ಕಾಗಿ ಸುರೇಖಾ ಪಲ್ಲವಿ ಅವರನ್ನು ಎನ್.ಎಫ್.ಎಚ್.ಎಸ್. ಕಾಲೇಜು ಪರವಾಗಿ ಸನ್ಮಾನಿಸಲಾಯಿತು. ಪ್ರಾಚಾರ್ಯ ನಲೀನಕುಮಾರ ಸ್ಯಾಮಸನ್, ಬಿ.ಕೆ. ಸುಂದರ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.