ಸೊಂಡೆಕೊಪ್ಪ ಚೆನ್ನಕೇಶವಸ್ವಾಮಿ

ಶುಕ್ರವಾರ, ಜೂಲೈ 19, 2019
26 °C

ಸೊಂಡೆಕೊಪ್ಪ ಚೆನ್ನಕೇಶವಸ್ವಾಮಿ

Published:
Updated:

ನೆಲಮಂಗಲದಿಂದ ತಾವರೆಕೆರೆ ಮೂಲಕ ಮಾಗಡಿಗೆ ಹೋಗುವ ದಾರಿಯಲ್ಲಿ ಸಿಕ್ಕುವ ಒಂದು ಸಣ್ಣಹಳ್ಳಿ ಸೊಂಡೆಕೊಪ್ಪ. ಇದು ಶ್ರೀ ಚೆನ್ನಕೇಶವಸ್ವಾಮಿ ನೆಲೆನಿಂತ ಪುಣ್ಯಕ್ಷೇತ್ರ.

ಪುರಾತನವಾದ ಈ ದೇವಾಲಯದ ಬಾಗಿಲಲ್ಲಿ ಶ್ರೀ ವೀರಾಂಜನೇಯ ಸ್ವಾಮಿಯನ್ನು ನೋಡಬಹುದು.

 

ಅಂಗಳದ  ಮಧ್ಯದಲ್ಲಿ 25 ಅಡಿ ಎತ್ತರದ ಕಲ್ಲಿನ ಧ್ವಜಸ್ತಂಭ, ಬಲಗಡೆ ದೊಡ್ಡ ಕಲ್ಯಾಣಿ, ಎಡಗಡೆ ಶ್ರೀ ಚೆನ್ನಕೇಶವನ ಸನ್ನಿಧಿ, ಅದರ ಹಿಂಭಾಗ ಮತ್ತು ಪಕ್ಕಕ್ಕೆ ಒಂದು ಹೂತೋಟ, ಅದರಲ್ಲಿ ಅಶ್ವತ್ಥಕಟ್ಟೆ ನಾಗರಮಂಟಪಗಳು, ವಿಶಾಲವಾದ ಒಂದು ಕಲ್ಯಾಣ ಮಂಟಪಗಳೆಲ್ಲ ಇವೆ. ದೇವಾಲಯದಲ್ಲಿನ ಚೆನ್ನಕೇಶವನ ವಿಗ್ರಹ ಬಹಳ ಹಿಂದೆ ಕೂಲಿ ಕಾರ್ಮಿಕನೊಬ್ಬನಿಗೆ ಸಿಕ್ಕಿದ್ದು ಎಂಬ ಪ್ರತೀತಿಯಿದೆ.ಸ್ವಾಮಿಯ ಪ್ರೀತ್ಯರ್ಥ ನಡೆಯುವ ಕೇಶವ ನವರಾತ್ರಿ ಮತ್ತು ತೆಪ್ಪೋತ್ಸವಗಳು ತುಂಬಾ ವೈಭವವೂ, ಆಕರ್ಷಕವೂ ಆಗಿರುತ್ತವೆ. ಕೇಶವ ನವರಾತ್ರಿಯಂದು ಗ್ರಾಮದುದ್ದಕ್ಕೂ ದೇವರ ಮೆರವಣಿಗೆ, ಹವನ, ಹೋಮ, ಭಜನೆ, ಮಹಾಭಾರತ ವಾಚನ, ಅನ್ನ ಸಂತರ್ಪಣೆಗಳು ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತವೆ.ಫಾಲ್ಗುಣ ದ್ವಾದಶಿಗೆ ಎರಡು ಅಥವಾ ಮೂರು ದಿನ ಮುಂಚೆ ತೆಪ್ಪೋತ್ಸವ. ಮಾವಿನ ಸೊಪ್ಪು, ವಿವಿಧ ಪತ್ರ ಪುಷ್ಪ ಮತ್ತು ಬಣ್ಣ ಬಣ್ಣ ದೀಪಗಳಿಂದ ಅಲಂಕರಿಸಿದ ತೆಪ್ಪದಲ್ಲಿ ಚೆನ್ನಕೇಶವ ಸ್ವಾಮಿ ಮತ್ತು ರಾಧಾ ರುಕ್ಮಿಣಿಯರ ಉತ್ಸವ ಮೂರ್ತಿಗಳನ್ನು ಇಟ್ಟು ಕಲ್ಯಾಣಿಯಲ್ಲಿ ಪ್ರದಕ್ಷಿಣೆ ಬರುವುದು ಕಣ್ಣಿಗೆ ಹಬ್ಬ ಉಂಟುಮಾಡುತ್ತದೆ.ಸೇವಾ ವಿವರ (ರೂ)

*  ಪಂಚಾಮೃತ ಅಭಿಷೇಕ 150

*  ರುದ್ರಾಭಿಷೇಕ 500

*  ಅಷ್ಟೋತ್ತರ 150

ಪೂಜೆ ಮತ್ತಿತರ ಮಾಹಿತಿಗೆ ದೇವಸ್ಥಾನದ ಅರ್ಚಕ ರಾಮಕೃಷ್ಣ ಭಟ್ಟರನ್ನು 94496 32122 ಮೊಬೈಲ್‌ನಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry