ಮಂಗಳವಾರ, ಮೇ 18, 2021
31 °C

ಸೊಮಾಲಿಯಾದಲ್ಲಿ ವಿಶ್ವಸಂಸ್ಥೆ ಕಚೇರಿ ಮೇಲೆ ದಾಳಿ: 8 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಗದಿಶು, ಸೊಮಾಲಿಯಾ (ಎಎಫ್‌ಪಿ): ಅಲ್ ಖೈದಾ ಬೆಂಬಲಿತ ಶೆಬಾದ್ ದಂಗೆಕೋರರು ನಗರದ ಕೇಂದ್ರ ಭಾಗದಲ್ಲಿರುವ ವಿಶ್ವಸಂಸ್ಥೆಯ ನೆಲೆಯನ್ನು ಗುರಿಯಾಗಿಟ್ಟುಕೊಂಡು ಬುಧವಾರ ನಡೆಸಿದ ಗುಂಡಿನ ದಾಳಿಯಲ್ಲಿ 8 ಜನ ಸಾವಿಗೀಡಾದರು.ವಿಶ್ವಸಂಸ್ಥೆ ಕಟ್ಟಡದ ಆವರಣದಲ್ಲಿ ನಡೆದ ಈ ದಾಳಿಯಿಂದಾಗಿ, ಮೂವರು ವಿದೇಶೀಯರು, ಇಬ್ಬರು ಸೊಮಾಲಿಯಾ ಭದ್ರತಾ ಸಿಬ್ಬಂದಿ ಹಾಗೂ ಸಮೀಪದ ಬೀದಿಯಲ್ಲಿದ್ದ ಮೂವರು ನಾಗರಿಕರು ಬಲಿಯಾದರು.ಇದು, ಈ ಪ್ರಕ್ಷುಬ್ಧ ರಾಷ್ಟ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಈ ನೆಲೆಯು ಆಫ್ರಿಕಾ ಒಕ್ಕೂಟದ ಸೇನಾ ಪಡೆಗಳು ಬೀಡುಬಿಟ್ಟಿರುವ ಜಾಗವೂ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.