ಸೊಮಾಲಿಯಾ: ಆತ್ಮಾಹುತಿ ದಾಳಿ 6 ಬಲಿ

7

ಸೊಮಾಲಿಯಾ: ಆತ್ಮಾಹುತಿ ದಾಳಿ 6 ಬಲಿ

Published:
Updated:

ಮೊಗದಿಶು (ಎಎಫ್‌ಪಿ): ಧುಸಮರೆಬ್ ಪಟ್ಟಣದಲ್ಲಿ ಹೋಟೆಲ್‌ವೊಂದರಲ್ಲಿ  ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ ಇಬ್ಬರು ಜನಪ್ರತಿನಿಧಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೋಟೆಲ್‌ನಲ್ಲಿ ಪ್ರಾದೇಶಿಕ ಆಡಳಿತ ವ್ಯವಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಸಭೆ ನಡೆಸುತ್ತಿದ್ದರು. ಆಗ ಹೊಟೇಲ್‌ಗೆ ನುಗ್ಗಿದ ಆತ್ಮಾಹುತಿ ದಾಳಿಕೋರ ತನ್ನನ್ನು ತಾನೇ ಸ್ಫೋಟಿಸಿಕೊಂಡ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry