ಸೊರಗಿದ ಚೆಲುವೆಯರು!

ಬುಧವಾರ, ಜೂಲೈ 17, 2019
25 °C

ಸೊರಗಿದ ಚೆಲುವೆಯರು!

Published:
Updated:

ನಾಪೋಕ್ಲು: ಸಮೀಪದ ನರಿ ಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಗ್ರಾಮ ದಲ್ಲಿರುವ ಎರಡು ರಮಣೀಯ ಜಲಪಾತಗಳು ಪ್ರತಿವರ್ಷ ಮಳೆಗಾಲದ ಈ ಅವಧಿಗೆ ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆ ಯುತ್ತಿದ್ದರೆ ಈ ವರ್ಷ ಜಲಪಾತದ ಭೋರ್ಗರೆತ ಕೇಳಿಸುತ್ತಿಲ್ಲ. ಮಳೆಯ ಕೊರತೆಯಿಂದ ಜಲಪಾತ ಸೊರಗಿವೆ.ಕೊಡಗಿನ ಅತಿ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನ್ನು ಚುಂಬಿಸುತ್ತ ನಿಂತಿದ್ದರೆ ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತವೆ. ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕೊಡಗಿನ ಪವಿತ್ರ ನದಿ ಕಾವೇರಿ ಉಗಮಿಸುತ್ತಾಳೆ. ಇತ್ತ ತಡಿಯಂಡಮೋಳ್ ಶಿಖರದ ಸರ ಹದ್ದಿನಲ್ಲಿರುವ ಇಗ್ಗುತ್ತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮ ಕುಂದು ಬೆಟ್ಟದಿಂದ ಸೋಮನ ನದಿ ಹರಿದು ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry