ಶನಿವಾರ, ಜೂಲೈ 11, 2020
27 °C

ಸೊರಟೂರ ವಿಎಸ್‌ಎಸ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಟೂರ ವಿಎಸ್‌ಎಸ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ

ಮುಳಗುಂದ: ಸಮೀಪದ ಸೊರಟೂರ ವಿಎಸ್‌ಎಸ್ ಬ್ಯಾಂಕಿನ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಗೆ ಭಾನುವಾರ ಗ್ರಾಮದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದರು.ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ಸಾಲಗಾರರ ಸಾಮಾನ್ಯ ಮತಕ್ಷೇತ್ರದಿಂದ ಹಾಗೂ ಬಿನ್ ಸಾಲಗಾರರ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿ ಬಹುಮತ ಪಡೆದು ಆಯ್ಕೆಯಾದರೆ, ಬಿಜೆಪಿ ಬೆಂಬಲಿತ ತನ್ನ 8 ಅಭ್ಯರ್ಥಿಗಳ ಪೈಕಿ ಒರ್ವ ಮಾತ್ರ ಸಾಲಗಾರರ ಕ್ಷೇತ್ರದಿಂದ ಆಯ್ಕೆಯಾದರು.ಮಲ್ಲಪ್ಪ ಕಲಗುಡಿ, ಫಕ್ಕೀರಪ್ಪ ಮಟ್ಟಿ, ಬಾಪುಗೌಡ ಪಾಟೀಲ, ಶಿವಪ್ಪ ಹೋಳಗಿ, ಪರಸಪ್ಪ ಮಲ್ಲಾರಿ, ದೇವಕ್ಕ ಜೈನರ, ರಾಮಪ್ಪ ತಳವಾರ ಸಾಲಗಾರರ ಕ್ಷೇತ್ರದಿಂದ ಹಾಗೂ ಬಿನ್ ಸಾಲಗಾರರ ಕ್ಷೇತ್ರದಿಂದ ಶಿವಮೂರ್ತಿ ಕರಿಗೌಡರ ಅವರು ಬಹುಮತ ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಗಿರೀಶ ಬಿ ಯಾವಗಲ್ ಪ್ರಕಟಿಸಿದರು.ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದಲ್ಲಿ ಮೆರವಣಿಗೆ ಹೊರಟು ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ, ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಮರಿಯಪ್ಪ ಸಣ್ಣತಂಗಿಯವರ, ನಾಗಪ್ಪ ಬೋಳನವರ, ಸೋಮಪ್ಪ ರಾಠೋಡ, ಸಿ.ಬಿ. ಸಂಶಿ, ಎಸ್.ವಿ. ಬೋಳನವರ, ಅಡಿವೆಪ್ಪ ಕುನ್ನೂರ, ಪರಸಪ್ಪ ಮಲ್ಲಾರಿ, ಕೃಷ್ಣ ನಾಯಕ, ಮೋಹನ ಅರ್ಕಸಾಲಿ, ಮಹೇಶ ಸಣ್ಣತಂಗಿಯವರ, ಹನಮಂತ ಕಾರ್ಬಾರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.