ಸೋಮವಾರ, ನವೆಂಬರ್ 18, 2019
20 °C

ಸೊರಬ: ಎಚ್. ಹಾಲಪ್ಪ ನಾಮಪತ್ರ ಸಲ್ಲಿಕೆ

Published:
Updated:

ಸೊರಬ: ಪಟ್ಟಣದ  ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಪೂಜೆ ಸಲ್ಲಿಸಿ,  ಅಭಿಮಾನಿಗಳು, ಕೆಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ತೆರಳಿದ ಎಚ್. ಹಾಲಪ್ಪ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.ಪತ್ನಿ ಯಶೋಧಾ, ಕೆಜೆಪಿ ಜಿಲ್ಲಾ ಕನ್ವಿನರ್ ಪುರುಷೋತ್ತಮ್, ತಾಲ್ಲೂಕು ಕೆಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್ ಹಾಗೂ ಹಿಂದೂಳಿದ ವರ್ಗಗಳ ಕಾರ್ಯದರ್ಶಿ ಬಸವರಾಜ ಓಟೂರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು.ಜಿಲ್ಲೆಯಲ್ಲಿ ಕೆಜೆಪಿಯಿಂದ ಚುನಾವಣಾ ಕಣಕ್ಕಿಳಿದ ಮೊದಲ ಅಭ್ಯರ್ಥಿ ಹಾಲಪ್ಪ.ಉಮೇದುವಾರಿಕೆ ಸಂದರ್ಭದಲ್ಲಿ ತಮ್ಮ ಬ್ಯಾಂಕ್ ಖಾತೆಯಲ್ಲಿ ರೂ. 2,04,033 ಹಾಗೂ ತಮ್ಮ ಪತ್ನಿ ಯಶೋಧಾ ಬ್ಯಾಂಕ್  ಖಾತೆಯಲ್ಲಿ ರೂ. 10,12,716  ಆಸ್ತಿ ವಿವರವನ್ನು ನಮೂದಿಸಿದ್ದಾರೆ.ಚುನಾವಣಾ ಅಧಿಕಾರಿಯಾಗಿ ಸಿ.ಎನ್. ಶ್ರೀಧರ್ ಕಾರ್ಯ ನಿರ್ವಹಿಸಿದರು. ತಹಶೀಲ್ದಾರ್ ಎನ್. ತೇಜಸ್ವಿಕುಮಾರ್ ಹಾಗೂ ಸಿಬ್ಬಂದಿ  ಹಾಜರಿದ್ದರು.ನಾಮಪತ್ರ ಸಲ್ಲಿಸಿ ನಂತರ ಮಾತನಾಡಿದ ಕೆಜೆಪಿ ಅಭ್ಯರ್ಥಿ ಎಚ್. ಹಾಲಪ್ಪ, ಇಂದಿನಿಂದ, ಕಾರ್ಯಕರ್ತರು ವಿರಮಿಸದೇ ಮೇ 5ರವರೆಗೂ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಎಂದರು.ಹೆಚ್ಚಿನ ಅಭಿವೃದ್ಧಿಯನ್ನು ಮಾಡಲು ಕೆಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.ಸಾಗರ ಕ್ಷೇತ್ರದ ಅಭ್ಯರ್ಥಿ ಬಿ.ಆರ್. ಜಯಂತ್ ಜಿಲ್ಲಾ ಘಟಕದ ಅಧ್ಯಕ್ಷ ಜೋತಿ ಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ಪಾಟೀಲ್, ಬಸವರಾಜಪ್ಪ, ಚಂದ್ರಪ್ಪ, ಗುರುಪ್ರಸಾದ್, ಗುರುಕುಮಾರ್ ಪಾಟೀಲ್ ಪರಮೇಶ್ವರ ಮಣ್ಣತ್ತಿ, ಮಹೇಶ್ ಗೌಳಿ, ನಿರಂಜನ ದೊಡ್ಡ್ಮನೆ ಹಾಜರಿದ್ದರು.

ಪ್ರತಿಕ್ರಿಯಿಸಿ (+)