ಬುಧವಾರ, ಮೇ 18, 2022
28 °C

ಸೊಳ್ಳೆಕಾಟ:ಗ್ರಾಮಸ್ಥರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತಾಲ್ಲೂಕಿನ ಉದನೂರ ಗ್ರಾಮದ ಬಳಿ ಗುಲ್ಬರ್ಗ ಮಹಾನಗರ ಪಾಲಿಕೆಯು ನಗರದ ಕಸವನ್ನು ತಂದು ಹಾಕುತ್ತಿರವುದರಿಂದ ಗ್ರಾಮಸ್ಥರು ತೊಂದರೆಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಪವನಕುಮಾರ ವಳಕೇರಿ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಅವರ ಗಮನ ಸೆಳೆದಿದ್ದಾರೆ.ಸೊಳ್ಳೆಗಳು, ನೊಣಗಳ ಕಾಟ ಹೆಚ್ಚಾಗಿದೆ. ದುರ್ವಾಸನೆ ತಾಳಲಾಗುತ್ತಿಲ್ಲ. ಆದ್ದರಿಂದ ಕೀಟನಾಶಕ ಸಿಂಪಡಿಸುವ ಮೂಲಕ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.ಉದನೂರ ಗ್ರಾಮಸ್ಥರು ಕಸವನ್ನು ಹಾಕಬೇಡಿ ಎಂದು ಮುಖ್ಯರಸ್ತೆಯಲ್ಲಿ ರಸ್ತೆತಡೆ ಮಾಡಿದರೆ ಸರ್ವೋಚ್ಚ ನ್ಯಾಯಲಯದ ಆದೇಶವಿದೆ. ರಸ್ತೆತಡೆ ನಡೆಸಿದರೆ ಪೊಲೀಸ್ ಕೇಸ್ ಹಾಕಲಾಗವುದು ಎಂದು ಹೇಳುತ್ತಿದ್ದಾರೆ.ಇದರಿಂದ ಪ್ರತಿಭಟನೆ ಮಾಡಲು ಗ್ರಾಮಸ್ಥರು ಹೆದರುವಂತಾಗಿದೆ. ಪಾಲಿಕೆಯವರು ಕಸ ತಂದು ಗ್ರಾಮದ ಬಳಿಯ್ಲ್ಲಲೇ ಹಾಕಿದರೂ ಕೇಳದೆ ಪೋಲಿಸರ ಹೆದರಿಕೆಯಿಂದ ಸುಮ್ಮನೇ ಇರವಂತಾಗಿದೆ ಎಂದು ಅಳಲು ತೋಡಿಕೊಂಡರು.ಕಳೆದ ಬಾರಿ ಮಳೆಗಾಲದಲ್ಲಿ ಡೆಂಗೆ ಜ್ವರದಿಂದ ಮಗು ಸಾವಿಗೀಡಾಗಿತ್ತು. ಅದು  ಅಧಿಕಾರಿಗಳಿಗೆ ಗೊತ್ತಿದೆ. ಮುಂದೆ ಈ ರೀತಿ ಯಾವುದೇ ಪ್ರಾಣಾಪಾಯವಾದರೇ ಪಾಲಿಕೆಯ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.ಕಸದಿಂದ ಗೊಬ್ಬರ ತಯಾರಿಸಲಾಗುತ್ತದೆ ಎಂದು ಪಾಲಿಕೆ ಗ್ರಾಮಸ್ಥರಿಗೆ ಹೇಳಿ ಕಸವನ್ನು ರಾಶಿ ಹಾಕುವ ಮೂಲಕ ಇಲ್ಲಿನ ಜನರನ್ನು ನರಕದಲ್ಲಿ ವಾಸ ಮಾಡುವಂತೆ ಮಾಡಿದೆ ಎಂದು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮನವಿ ಸಲ್ಲಿಸಿದರು. ಜನ ವಾಸವಾಗಿದ್ದ ಬಡಾವಣೆ ಅಥವಾ ಗ್ರಾಮವಿದ್ದರೇ ಅಲ್ಲಿಂದ ಸುಮಾರು 7ರಿಂದ 8 ಕಿಮೀ ದೂರ ಕಸ ವಿಲೇವಾರಿ ಮಾಡಬೇಕು. ಆದರೆ ಗ್ರಾಮದ ಸಮೀಪದಲ್ಲಿಯೇ ಕಸ ವಿಲೇವಾರಿ ಮಾಡಲಾಗುತ್ತಿದೆ.ಇನ್ನಾದರೂ ಕಸ ಹಾಕುವ ಸ್ಥಳವನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ವಳಕೇರಿ  ಒತ್ತಾಯಿಸಿದ್ದಾರೆ.ಮಲ್ಲಣಗೌಡ ನಂದಿಕೂರ, ಪವನಕುಮಾರ ವಳಕೇರಿ, ಶರಣಬಸಪ್ಪ ಮೂಲಗೆ ಶಿವಪುತ್ರ ಪಾಟೀಲ್ ಹಾಗೂ ಮಲ್ಲಿಕಾರ್ಜುನ್, ಮಾಪಣ್ಣಾ ಕೋಳ್ಳುರ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.