ಸೊಳ್ಳೆ ನಿಯಂತ್ರಣ: ಫಾಗಿಂಗ್‌ಗೆ ಚಾಲನೆ

7

ಸೊಳ್ಳೆ ನಿಯಂತ್ರಣ: ಫಾಗಿಂಗ್‌ಗೆ ಚಾಲನೆ

Published:
Updated:

ಹುಮನಾಬಾದ್: ಹಲವು ರೋಗ ತಡೆಗೆ ಸೊಳ್ಳೆಕಾಟ ನಿಯಂತ್ರಿಸುವ ಉ್ದ್ದದ್ದೇಶದಿಂದ ಸೋಮವಾರ ಆರಂಭಿಸಲಾದ ಫಾಗಿಂಗ್ ಯಂತ್ರದ ಮೂಲಕ ಔಷಧ ಸಿಂಪಡಿಸುವ ಫಾಗಿಂಗ್ ಯಂತ್ರಕ್ಕೆ ದುಬಲಗುಂಡಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿ.ನಾತೆ ಚಾಲನೆ ನೀಡಿದರು. ನಂತರ ಮಾತನಾಡಿದ ಪ್ರತಿಭಾ ಅವರು, ಕಣ್ತಪ್ಪಿ ಗ್ರಾಮದ ಯಾವುದಾದರೂ ವಾರ್ಡ್‌ಗಳಲ್ಲಿ ಸೊಳ್ಳೆನಾಶಕ ಔಷಧ ಸಿಂಪರಿಸದೇ ಇದ್ದಲ್ಲಿ ಗ್ರಾಮಸ್ಥರು ಪಂಚಾಯಿತಿ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.ಉಪಾಧ್ಯಕ್ಷ ಮೇರಾಜ್ ಭಾಲ್ಕಿಬೇಸ್, ಸದಸ್ಯ ತುಕಾರಾಮ ಭೋಜಗುಂಡಿ, ಕಾಂಗ್ರೆಸ್ ಪಕ್ಷದ ಮುಖಂಡ ಎನ್.ವಿಜಯಕುಮಾರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry