ಸೋನಾಕ್ಷಿಗೆ ಅಮ್ಮನ ಶಹಬ್ಬಾಸ್‌ಗಿರಿ

ಸೋಮವಾರ, ಜೂಲೈ 22, 2019
27 °C
ಪಂಚರಂಗಿ

ಸೋನಾಕ್ಷಿಗೆ ಅಮ್ಮನ ಶಹಬ್ಬಾಸ್‌ಗಿರಿ

Published:
Updated:

`ಲೂಟೇರಾ' ಚಿತ್ರದಲ್ಲಿ ಮಗಳ ಅಭಿನಯ ಕೌಶಲ ಕಂಡು ಪೂನಂ ಸಿನ್ಹ ಆನಂದತುಂದಿಲರಾಗಿದ್ದಾರೆ. `ಸೋನಾಕ್ಷಿಗೆ ಇನ್ನು ಅವರಪ್ಪ ಶತ್ರುಘ್ನ ಸಿನ್ಹ ಕೂಡ ಕಿವಿಮಾತು ಹೇಳಲು ಹಿಂದುಮುಂದು ನೋಡಬೇಕು, ಹಾಗಿದೆ ಅವಳ ಅಭಿನಯ' ಎಂದು ಬಾಯಿತುಂಬಾ ಹೊಗಳಿದ್ದಾರೆ.ಜುಲೈ 5ರಂದು ತೆರೆಕಾಣಲಿರುವ `ಲೂಟೇರಾ'  1950ರ ದಶಕದ ಪ್ರೇಮಕತೆಯನ್ನು ಒಳಗೊಂಡ ಚಿತ್ರ. ವಿಕ್ರಮಾದಿತ್ಯ ಮೋಟ್ವಾನೆ ಚಿತ್ರದ ನಿರ್ದೇಶಕ. ಸೋನಾಕ್ಷಿ ಸಿನ್ಹ ಅವರಿಗೆ ಜೋಡಿಯಾಗಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ.`ಇದುವರೆಗೆ ಮಗಳು ನಟಿಯಾಗಿ ಬೆಳೆಯಬೇಕು ಎಂದು ಅನೇಕ ಸಲ ಅವಳಿಗೆ ಕಿವಿಮಾತು ಹೇಳುತ್ತಿದ್ದೆ. ಈ ಚಿತ್ರದಲ್ಲಿ ಅವಳ ಅಭಿನಯ ಕಂಡು ನನಗೆ ಮಾತೇ ಹೊರಡದಂತಾಯಿತು.

ಇನ್ನು ಅವಳ ಅಪ್ಪ ಕೂಡ ಸಲಹೆ ಕೊಡಲು ಯೋಚಿಸಬೇಕು' ಎಂದು ಪೂನಂ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ. ರಣವೀರ್ ಸಿಂಗ್ ನಟನೆಯ ಕುರಿತೂ ಅವರ ಮಾತಿನಲ್ಲಿ ಮೆಚ್ಚುಗೆ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry