ಶನಿವಾರ, ಜನವರಿ 18, 2020
20 °C

ಸೋನಿಯಾಗಾಂಧಿ ಹೆಸರಲ್ಲಿ ನಕಲಿ ಪಡಿತರ ಚೀಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಥಾಣೆ (ಐಎಎನ್‌ಎಸ್): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರ ಹೆಸರಿನಲ್ಲಿರುವ ನಕಲಿ ಪಡಿತರ ಚೀಟಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಬುಧವಾರ ತಿಳಿಸಿದ್ದಾರೆ.ಕಳೆದ ವರ್ಷದ ಆಗಸ್ಟ್‌ನಲ್ಲಿ ಈ ಪಡಿತರ ಚೀಟಿಯನ್ನು ಥಾಣೆಯ ಪಡಿತರ ಅಧಿಕಾರಿಗಳು ನೀಡಿದ್ದಾರೆ. ಈ ಕುಟುಂಬದ ವಾರ್ಷಿಕ ಆದಾಯ 30 ಸಾವಿರ ರೂಪಾಯಿ ಎಂದು ನಮೂದಿಸಲಾಗಿದ್ದು, ಸೋನಿಯಾ ಅವರ ದೆಹಲಿ ವಿಳಾಸವನ್ನು ನಮೂದಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಪ್ರವೀಣ್ ಪಾಂಡೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಉಲ್ಲಾಸನಗರ ಮಹಾನಗರ ಪಾಲಿಕೆಯ ವಾಹನ ನಿಲುಗಡೆ ಸ್ಥಳದಲ್ಲಿ ಈ ಪಡಿತರ ಚೀಟಿ ಪತ್ತೆಯಾಗಿದೆ.

`ಕೆಲಸದ ನಿಮಿತ್ತ ನಾನು ಮತ್ತು ನನ್ನ ಗೆಳೆಯ ಪ್ರೇಮಚಂದ್ ಝಾ ಉಲ್ಲಾಸ್ ನಗರ ಮಹಾನಗರ ಪಾಲಿಕೆಗೆ ಹೋಗಿದ್ದಾಗ ನಮ್ಮ ವಾಹನ ನಿಲುಗಡೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಈ ಚೀಟಿ ಕಾಣಿಸಿತು. ಯಾರೋ ಪಡಿತರ ಚೀಟಿ ಕಳೆದುಕೊಂಡಿರಬಹುದು ಎಂದು ನಾವು ಭಾವಿಸಿದೆವು. ಆದರೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಹೆಸರಿನ ಪಡಿತರ ಚೀಟಿ ನೋಡಿ ಆಶ್ಚರ್ಯಗೊಂಡೆವು. ಅದರಲ್ಲಿ ಅವರ ದೆಹಲಿಯ ವಿಳಾಸವಿತ್ತು~ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)