ಸೋಮವಾರ, ಮೇ 23, 2022
30 °C

ಸೋನಿಯಾಗೆ ಆಮಂತ್ರಣ ನೀಡಿದ ವರುಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಬಿಜೆಪಿ ಸಂಸದ ವರುಣ್ ಗಾಂಧಿ ಬುಧವಾರ ಯುಪಿಎ ಅಧ್ಯಕ್ಷೆಯೂ ಆಗಿರುವ ತಮ್ಮ ದೊಡ್ಡಮ್ಮ ಸೋನಿಯಾ ಗಾಂಧಿ ಅವರನ್ನು ಅವರ ನಿವಾಸದಲ್ಲಿಯೇ ಬುಧವಾರ ಭೇಟಿ ಮಾಡಿ ತನ್ನ ವಿವಾಹದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಿದರು.ಬಿಜೆಪಿ ಸಂಸದೆ ಮೇನಕಾ ಗಾಂಧಿ ಪುತ್ರ ವರುಣ್ (30) ವಿವಾಹ ಮುಂದಿನ ತಿಂಗಳು ನಿಗದಿಯಾಗಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸೋನಿಯಾ ನಿವಾಸದಲ್ಲಿ ಕಳೆದ ವರುಣ್ ಅಲ್ಲಿಯೇ ಮಧ್ಯಾಹ್ನದ ಭೋಜನ ಸವಿದರು.ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಾರ್ಚ್ 6ರಂದು  ಗ್ರಾಫಿಕ್ ವಿನ್ಯಾಸಗಾರ್ತಿ ಪಶ್ಚಿಮ ಬಂಗಾಳದ ಯಾಮಿನಿ ರಾಯ್ ಅವರನ್ನು ವಿವಾಹ ಆಗಲಿದ್ದಾರೆ. ವಿವಾಹದ ಆರತಕ್ಷತೆ ದೆಹಲಿ ಮತ್ತು ವರುಣ್ ಪ್ರತಿನಿಧಿಸುವ ಪಿಲಿಬಿಟ್‌ನಲ್ಲಿಯೂ ಆಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.