ಸೋನಿಯಾ ಗಾಂಧಿ ಚೇತರಿಕೆ

7

ಸೋನಿಯಾ ಗಾಂಧಿ ಚೇತರಿಕೆ

Published:
Updated:
ಸೋನಿಯಾ ಗಾಂಧಿ ಚೇತರಿಕೆ

ನವದೆಹಲಿ (ಐಎಎನ್‌ಎಸ್):  ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇದೀಗ ಮತ್ತೆ ವೈಯಕ್ತಿಕ ಸಂದರ್ಶಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗುತ್ತಿದ್ದಾರೆ ಎಂದು ಗುರುವಾರ ಪಕ್ಷದ ಮೂಲಗಳು ತಿಳಿಸಿವೆ.`ಸೋನಿಯಾ ಅವರಿಗೆ ಶಸ್ತ್ರಚಿಕಿತ್ಸೆ ಆಗಿದೆ ಎಂದು ನಂಬಲಿಕ್ಕೇ ಸಾಧ್ಯವಿಲ್ಲ. ಅವರು ಎಂದಿನಂತೆ  ಲವಲವಿಕೆಯಿಂದ ಇದ್ದಾರೆ~ ಎಂದು ಅವರನ್ನು ಭೇಟಿ ಮಾಡಿದ ಪಕ್ಷದ ಕಾರ್ಯಕರ್ತರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಚೆನ್ನಿತ್ತಲ ಮತ್ತಿತರರು ಗುರುವಾರ 10- ಜನಪಥದಲ್ಲಿರುವ ಸೋನಿಯಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಹಿಂದಿನ ದಿನ ಸೋನಿಯಾ ಅವರು ಪುತ್ರಿ ಪ್ರಿಯಾಂಕ ಅವರ ಮನೆಗೆ ಭೇಟಿ ನೀಡಿದ್ದರು. ಇದೇ ತಿಂಗಳ 15 ರಂದು ಅವರ ಅಧ್ಯಕ್ಷತೆಯಲ್ಲಿ  ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆದಿತ್ತು.ಅಮೆರಿಕದಲ್ಲಿ ಐದು ವಾರಗಳ ಚಿಕಿತ್ಸೆ ಬಳಿಕ ಸೋನಿಯಾ  ಇದೇ ತಿಂಗಳು 8 ರಂದು ದೆಹಲಿಗೆ ವಾಪಸಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry