ಸೋನಿಯಾ ಗಾಂಧಿ ವೈದ್ಯಕೀಯ ವೆಚ್ಚ ಪಡೆದಿಲ್ಲ - ಸಿಐಸಿ

7

ಸೋನಿಯಾ ಗಾಂಧಿ ವೈದ್ಯಕೀಯ ವೆಚ್ಚ ಪಡೆದಿಲ್ಲ - ಸಿಐಸಿ

Published:
Updated:

ನವದೆಹಲಿ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸರ್ಕಾರದಿಂದ ಯಾವುದೇ ವೈದ್ಯಕೀಯ ವೆಚ್ಚವನ್ನು ಪಡೆದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಬುಧವಾರ ಹೇಳಿದೆ.ಸರ್ಕಾರದ ಬೊಕ್ಕಸದಿಂದ ಸೋನಿಯಾ ಗಾಂಧಿ ಅವರ ಚಿಕಿತ್ಸೆ ಹಾಗೂ ವಿದೇಶ ಪ್ರಯಾಣಕ್ಕಾಗಿ 1880 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆರೋಪ ಹಿನ್ನೆಲೆಯಲ್ಲಿ ಎದ್ದ ವಿವಾದದ ಬೆನ್ನಲ್ಲೇ ಸಿಐಸಿ ಆಯುಕ್ತ ಸತ್ಯಾನಂದ ಮಿಶ್ರಾ ಅವರು ಸೋನಿಯಾ ಗಾಂಧಿ ಅವರು ಸರ್ಕಾರಕ್ಕೆ ತಮ್ಮ ಯಾವುದೇ ವೈದ್ಯಕೀಯ ವೆಚ್ಚದ ರಶೀದಿಗಳನ್ನು ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಯಾವುದೇ ಸಂದರ್ಭದಲ್ಲಿ ಸೋನಿಯಾ ಅವರು ತಮ್ಮ ಚಿಕಿತ್ಸೆಗಾಗಿ ದೇಶ ಇಲ್ಲವೇ ವಿದೇಶಿದಲ್ಲಿ ವೈಯಕ್ತಿಕ ಹಣ ಖರ್ಚು ಮಾಡಿದರೆ ಅದು ಖಾಸಗಿ ವಿಷಯವಾಗುತ್ತದೆ. ಅದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಬಾರದು ಎಂದು ಮಿಶ್ರಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry