ಸೋನಿಯಾ ಚಿಕಿತ್ಸೆಗೆ ಕೇಂದ್ರದ ನೆರವು: ಮೋದಿ ಆರೋಪ ಅಲ್ಲಗಳೆದ ಶುಕ್ಲಾ

7

ಸೋನಿಯಾ ಚಿಕಿತ್ಸೆಗೆ ಕೇಂದ್ರದ ನೆರವು: ಮೋದಿ ಆರೋಪ ಅಲ್ಲಗಳೆದ ಶುಕ್ಲಾ

Published:
Updated:
ಸೋನಿಯಾ ಚಿಕಿತ್ಸೆಗೆ ಕೇಂದ್ರದ ನೆರವು: ಮೋದಿ ಆರೋಪ ಅಲ್ಲಗಳೆದ ಶುಕ್ಲಾ

ನವದೆಹಲಿ (ಐಎಎನ್‌ಎಸ್): ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದೇಶ ಪ್ರವಾಸ ಹಾಗೂ ವಿದೇಶದಲ್ಲಿನ ಅವರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ರೂ 1,880 ಕೋಟಿ ವೆಚ್ಚ ಮಾಡಿದೆ ಎಂದು ಮೋದಿ ಮಾಡಿದ ಆರೋಪ ಸುಳ್ಳೆಂದು ಸಾಬೀತಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮಂಗಳವಾರ ಒತ್ತಾಯ ಮಾಡಿದೆ.`ಸೋನಿಯಾ ಅವರ ವಿದೇಶಕ್ಕೆ ಭೇಟಿ ನೀಡಿ, ಚಿಕಿತ್ಸೆ ಪಡೆದಿದ್ದಾರೆ ಎಂಬುದು ಈಗ ಸುಳ್ಳಾಗಿದ್ದು, ಮೋದಿ ದೇಶದ ಹಾಗೂ ಗಾಂಧಿ ಕುಟುಂಬದ ಕ್ಷಮೆ ಕೇಳಬೇಕು~ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಹೇಳಿದ್ದಾರೆ.ಮೋದಿ ಅವರು ನೀಡಿರುವ ಅಂಕಿ ಅಂಶಗಳು ತಪ್ಪಾಗಿವೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪಡೆಯದೆ ಮಾಧ್ಯಮಗಳ ಮುಂದೆ ಈ ವಿವರಗಳನ್ನು ನೀಡಿದ್ದು, ಅವರು ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಶುಕ್ಲಾ ಆರೋಪಿಸಿದರು.`ಸೋನಿಯಾ ಅವರ ಚಿಕಿತ್ಸೆಗೆ ಸರ್ಕಾರದ ಬೊಕ್ಕಸದಿಂದ ಒಂದು ಪೈಸೆಯನ್ನೂ ಖರ್ಚು ಮಾಡಲಾಗಿಲ್ಲ. ಮೋದಿ ಅವರು ಹೇಳಿಕೆಯನ್ನು ಉಲ್ಲೇಖಿಸಿರುವ ಸುದ್ದಿ ಪತ್ರಿಕೆಯ ಸಂಪಾದಕರೂ ಇದು ಸುಳ್ಳು ಎಂದು ತಿಳಿಸಿದ್ದಾರೆ~ ಎಂದು ಶುಕ್ಲಾ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry