ಸೋನಿಯಾ ಜೀವನ ಚರಿತ್ರೆ

7

ಸೋನಿಯಾ ಜೀವನ ಚರಿತ್ರೆ

Published:
Updated:

ಲಂಡನ್ (ಪಿಟಿಐ): ರಾಜಕೀಯ ಪ್ರವೇಶಕ್ಕೆ ನಿರಾಸಕ್ತಿ ಹೊಂದಿದ್ದ ಮತ್ತು ತಾನಾಗೇ ಒಲಿದು ಬಂದಿದ್ದ ಪ್ರಧಾನಿ ಪಟ್ಟ ನಿರಾಕರಿಸಿದ ಕಾಂಗ್ರೆಸ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆ ಒಳಗೊಂಡ ಪುಸ್ತಕವನ್ನು ಶುಕ್ರವಾರ ರಾತ್ರಿ ಇಲ್ಲಿ ಬಿಡುಗಡೆ ಮಾಡಲಾಗಿದೆ.ಅನಿವಾಸಿ ಭಾರತೀಯ ಪತ್ರಕರ್ತೆ ರಾಣಿ ಸಿಂಗ್ ಅವರ `ಸೋನಿಯಾ ಗಾಂಧಿ: ಆ್ಯನ್ ಎಕ್ಸ್‌ಟ್ರಾಆರ್ಡಿನರಿ ಲೈಫ್, ಆ್ಯನ್ ಇಂಡಿಯನ್ ಡೆಸ್ಟಿನಿ~ ಪುಸ್ತಕವನ್ನು ದಕ್ಷಿಣ ಏಷ್ಯಾ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು.ರಷ್ಯದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದು, `ರಾಜೀವ್ ಅವರ ಪತ್ನಿಯಾಗಿ, ಎರಡು ಮಕ್ಕಳ ತಾಯಿಯಾಗಿ, ಘನತೆ, ಶಕ್ತಿ ಪ್ರತಿರೂಪವಾಗಿ, ರಾಜಕೀಯ ನಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ಸೋನಿಯಾ ಬಗ್ಗೆ ಭಾರತ ಹೆಮ್ಮೆ ಪಡಬೇಕು~ ಎಂದಿದ್ದಾರೆ.

 

`ಮಾಜಿ- ಹಾಲಿ ಅಧಿಕಾರಿಗಳು, ಕಾಂಗ್ರೆಸ್ ಧುರೀಣರು, ವಿರೋಧ ಪಕ್ಷಗಳ ಮುಖಂಡರು, ಆಪ್ತರ ಸಂದರ್ಶನ ನಡೆಸಿ ಬರೆದಿರುವ ರಾಣಿ, ಸೋನಿಯಾ ಬಗ್ಗೆ ಬೆಳಕು ಚೆಲ್ಲಿದ್ದಾರೆ~ ಎಂದು ಪ್ರಕಾಶಕ ಲಾಲ್‌ಗ್ರೆವ್ ಮ್ಯಾಕ್‌ಮಿಲನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry