ಸೋನಿಯಾ ಪ್ರವಾಸದ ಲೆಕ್ಕ ಕೇಳಿದ ಬಿಜೆಪಿ

7

ಸೋನಿಯಾ ಪ್ರವಾಸದ ಲೆಕ್ಕ ಕೇಳಿದ ಬಿಜೆಪಿ

Published:
Updated:

ನವದೆಹಲಿ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯ ವಿಷಯ ಹೇಳಿ ಗಮನ ಬೇರೆಡೆ ಸೆಳೆಯುವುದನ್ನು ಬಿಟ್ಟು, ಸಾರ್ವಜನಿಕ ಬೊಕ್ಕಸದಿಂದ ಅವರ ವಿದೇಶ ಪ್ರವಾಸ ಮತ್ತು ಚಿಕಿತ್ಸೆಗೆ ಎಷ್ಟು ಖರ್ಚು ಮಾಡಲಾಗಿದೆ ಹೇಳಿ ಎಂದು ಬಿಜೆಪಿ ಮಂಗಳವಾರ ಕಾಂಗ್ರೆಸ್‌ಗೆ ಸವಾಲು ಹಾಕಿದೆ.ಸೋಮವಾರವಷ್ಟೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿ ಅವರು ತಮ್ಮ ಚಿಕಿತ್ಸೆ ಹಾಗೂ ವಿದೇಶ ಪ್ರವಾಸಕ್ಕಾಗಿ 1,880 ಕೋಟಿ ಸಾರ್ವಜನಿಕ ಹಣ ಖರ್ಚು ಮಾಡಿದ್ದಾರೆ ಎಂದು ಮಾಧ್ಯಮವೊಂದರಲ್ಲಿ ಆರೋಪಿಸಿರುವ ಬೆನ್ನಲ್ಲೇ ಬಿಜೆಪಿ ಈ ಕುರಿತಂತೆ ಲೆಕ್ಕ ನೀಡುವಂತೆ ಕಾಂಗ್ರೆಸ್‌ಗೆ ಆಗ್ರಹಿಸಿದೆ.

 

`ಗಮನ ಬೇರೆಡೆ ಸೆಳೆಯುವ ಕಾಂಗ್ರೆಸ್‌ನ ನಡತೆಯನ್ನು ನಾವು ಖಂಡಿಸುತ್ತೇವೆ. ಅಲ್ಲದೇ, ಮಾಧ್ಯಮವೊಂದರ ವರದಿ ಉಲ್ಲೇಖಿಸಿ ಗುಜರಾತ್ ಮುಖ್ಯಮಂತ್ರಿ (ನರೇಂದ್ರ ಮೋದಿ) ಅವರು ಎತ್ತಿರುವ ಪ್ರಶ್ನೆ ಕುರಿತಂತೆ ನಿಮಗೆ ನಿಜವಾಗಿ ಆಸಕ್ತಿ ಇದ್ದರೆ ಎಷ್ಟು ಹಣ ವೆಚ್ಚ ಮಾಡಲಾಗಿದೆ ಉತ್ತರಿಸಿ~ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸಿತಾರಾಮನ್ ಹೇಳಿದರು.

 

`ಒಂದು ವೇಳೆ 1,880 ಕೋಟಿಯಷ್ಟು ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡಿಲ್ಲ ಎನ್ನುವುದಾದರೆ ಯಾಕೆ ಸುಮ್ಮನಿದ್ದಿರಿ ನಮ್ಮ ಪ್ರಶ್ನೆಗೆ ಉತ್ತರಿಸಿ~ ಎಂದು ನಿರ್ಮಲಾ ಅವರು ಸವಾಲು ಹಾಕಿದರು.ಇದೇ ವೇಳೆ ಅವರು `ನಾವು ಕೂಡ ಸೋನಿಯಾ ಗಾಂಧಿ ಅವರ ಆರೋಗ್ಯ ಕುರಿತಂತೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ ಆದರೆ ಸಾರ್ವಜನಿಕ ಖಜಾನೆಯಿಂದ ಎಷ್ಟು ಖರ್ಚು ಮಾಡಲಾಗಿದೆ ಎನ್ನುವುದನ್ನು ದಯವಿಟ್ಟು ಸ್ಪಷ್ಟಪಡಿಸಿ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry