ಮಂಗಳವಾರ, ಆಗಸ್ಟ್ 20, 2019
25 °C

ಸೋನಿಯಾ ಹೊಗಳಿಕೆ: ಟಿಆರ್‌ಎಸ್‌ನಿಂದ ಸದಸ್ಯೆ ವಿಜಯಶಾಂತಿ ಅಮಾನತು

Published:
Updated:

ಹೈದರಾಬಾದ್:  ತೆಲಂಗಾಣ ರಚನೆ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಹೊಗಳಿದ್ದಕ್ಕಾಗಿ ಮತ್ತು ಟಿಆರ್‌ಎಸ್‌ನ ವಾದವನ್ನು ಸಮರ್ಥಿಸದೇ ಇದ್ದುದಕ್ಕಾಗಿ ಮೇದಕ್ ಲೋಕಸಭಾ ಕ್ಷೇತ್ರದ ಸದಸ್ಯೆ, ನಟಿ, ತೆಲಂಗಾಣ ಪ್ರದೇಶ ಪ್ರಭಾವಿ ಮಹಿಳೆ ವಿಜಯಶಾಂತಿ ಅವರನ್ನು ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್) ಅಮಾನತು ಮಾಡಿದೆ.ತೆಲಂಗಾಣ ವಿಚಾರದಲ್ಲಿ ಸೋನಿಯಾ ಗಾಂಧಿ ಅವರ ನಿರ್ಧಾರ `ಅದ್ಭುತ'ವಾದುದು. ಪ್ರತ್ಯೇಕ ರಾಜ್ಯ ರಚನೆಯ ಯಶಸ್ಸು ಜನರಿಗೆ ಸೇರಬೇಕೇ ಹೊರತು, ಚಳವಳಿಯ ಮುಂಚೂಣಿಯಲ್ಲಿದ್ದ ಟಿಆರ್‌ಎಸ್‌ನಂತಹ ಪಕ್ಷಗಳಿಗಲ್ಲ ಎಂದು ವಿಜಯಶಾಂತಿ ಅವರು ನೀಡಿರುವ ಹೇಳಿಕೆ ಈಗ ಅವರ ಅಮಾನತಿಗೆ ಕಾರಣವಾಗಿದೆ.ವಿಜಯಶಾಂತಿ ಅವರು ಹೈದರಾಬಾದ್‌ನ ತಮ್ಮ ನಿವಾಸದ ಮುಂದೆ ಇಂದಿರಾಗಾಂಧಿ ಅವರ ದೊಡ್ಡ  ಜಾಹೀರಾತು ಫಲಕವನ್ನು ಹಾಕಿದ್ದಾರೆ. ಅಲ್ಲದೇ, ತೆಲಂಗಾಣ ರಾಜ್ಯ ರಚನೆ ಘೋಷಣೆ ಆದ ನಂತರ ಅವರು ಟಿಆರ್‌ಎಸ್ ಸಭೆಗಳಲ್ಲೂ ಭಾಗವಹಿಸಿಲ್ಲ. ಈ ಕಾರಣಗಳಿಗಾಗಿ ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರು ವಿಜಯಶಾಂತಿ ಅವರನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.

Post Comments (+)