ಮಂಗಳವಾರ, ಏಪ್ರಿಲ್ 20, 2021
26 °C

ಸೋನು ಸಿನ್ಹಾಗೆ ರೈಲ್ವೆ ಇಲಾಖೆ: ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ರೈಲ್ವೆ ಅಪಘಾತದಲ್ಲಿ ತಮ್ಮ ಎಡಗಾಲು ಕಳೆದುಕೊಂಡ ರಾಷ್ಟ್ರ ಮಟ್ಟದ ಫುಟ್‌ಬಾಲ್ ಹಾಗೂ ವಾಲಿಬಾಲ್ ಆಟಗಾರ್ತಿ ಸೋನು ಸಿನ್ಹಾ ಅವರಿಗೆ ರೈಲ್ವೆ ಇಲಾಖೆ ಉದ್ಯೋಗ ನೀಡಲು ಮುಂದಾಗಿದೆ.ಸೋಮವಾರ ಸೋನು ಸಿನ್ಹಾ (25) ಪರೀಕ್ಷೆಗೆಂದು ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನವದೆಹಲಿಗೆ ತೆರಳುತ್ತಿದ್ದರು.  ಚೆನಾಟಿ-ಬರೇಲಿ ರೈಲು ನಿಲ್ದಾಣದ ನಡುವೆ ದುಷ್ಕರ್ಮಿಗಳು ರೈಲಿನಲ್ಲಿ ದರೋಡೆ ನಡೆಸಲು ಯತ್ನಿಸಿದಾಗ ಅದನ್ನು ಸೋನು ತಡೆಯಲು ಯತ್ನಿಸಿದ್ದರು. ಆಗ ದುಷ್ಕರ್ಮಿಗಳು ಅವರನ್ನು ರೈಲಿನಿಂದ ಹೊರಗೆ ತಳ್ಳಿದ್ದರು. ಸೋನು ಟ್ರ್ಯಾಕ್ ನಲ್ಲಿ ಬಿದ್ದಾಗ ಮತ್ತೊಂದು ರೈಲು ಅವರ ಕಾಲಿನ ಮೇಲೆ ಹಾದು ಹೋಗಿದ್ದ ಪರಿಣಾಮ  ಎಡಗಾಲು ಕಳೆದು ಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.