ಸೋಮಣ್ಣ: ರಾಜ್ಯ ಬಿಜೆಪಿ ಉಪಾಧ್ಯಕ್ಷ

7

ಸೋಮಣ್ಣ: ರಾಜ್ಯ ಬಿಜೆಪಿ ಉಪಾಧ್ಯಕ್ಷ

Published:
Updated:

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ನೂತನ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ 10 ಪ್ರಮುಖರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.ಬಿ.ಎಲ್‌. ಸಂತೋಷ್‌ ಅವರು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ವಿವಿಧ ಹುದ್ದೆಗಳಿಗೆ ನೇಮಕಗೊಂಡವರ ಹೆಸರು ಇಲ್ಲಿದೆ.ಉಪಾಧ್ಯಕ್ಷರು: ಶಾಸಕರಾದ ಎಂ.ಬಿ. ಭಾನುಪ್ರಕಾಶ್‌, ಹಾಲಪ್ಪ ಬಸಪ್ಪಾಚಾರ್‌, ಬಿ.ಎನ್‌. ವಿಜಯ ಕುಮಾರ್‌, ವಿ. ಸುನೀಲ್‌ಕುಮಾರ್‌, ಮುಖಂಡರಾದ ಮಾ. ನಾಗರಾಜ್‌, ಸುಲೋಚನಾ ಭಟ್‌, ರೀನಾ ಪ್ರಕಾಶ್‌, ರೇಖಾ ಹುಲಿಯಪ್ಪ ಗೌಡ.ಪ್ರಧಾನ ಕಾರ್ಯದರ್ಶಿಗಳು: ಶಾಸಕ ರಾದ ಸಿ.ಟಿ. ರವಿ, ರಘುನಾಥರಾವ್‌ ಮಲ್ಕಾಪುರೆ, ಸೋಮಣ್ಣ ಬೇವಿನಮರದ ಮತ್ತು ಮಾಜಿ ಶಾಸಕ ನಿರ್ಮಲ್‌ ಕುಮಾರ್‌ ಸುರಾನ.ಕಾರ್ಯದರ್ಶಿಗಳು: ಎಂ.ಬಿ. ನಂದೀಶ್‌, ಪ್ರಕಾಶ ಖಂಡ್ರೆ, ಶಿವಾನಂದ ಕಲ್ಲೂರು, ಪದ್ಮಾ ಚಂದ್ರು, ಭಾರತಿ ಜಂಭಗಿ, ಶಾಮಲಾ ಕುಂದರ್‌, ಸುಧಾ ಜಯ ರುದ್ರೇಶ್‌, ಶಾಸಕರಾದ ಮಹಂತೇಶ ಕವಟಗಿಮಠ ಮತ್ತು ಸಿದ್ಧರಾಜು.ಖಜಾಂಚಿ: ಗೋಪಿನಾಥ ರೆಡ್ಡಿ,ಸಹ ಖಜಾಂಚಿ ಮತ್ತು ಕಾರ್ಯಾಲಯ ಕಾರ್ಯದರ್ಶಿ: ಎಸ್‌. ಕೇಶವ ಪ್ರಸಾದ್‌,ಕ್ತಾರ: ವಿಧಾನ ಪರಿಷತ್‌ ಸದಸ್ಯ ಅಶ್ವತ್ಥ ನಾರಾಯಣ.

ವಿವಿಧ ಮೋರ್ಚಾಗಳ ಅಧ್ಯಕ್ಷರು: ಪಿ. ಮುನಿರಾಜು (ಯುವ), ಶಾಸಕಿ ಶಶಿಕಲಾ ಜೊಲ್ಲೆ (ಮಹಿಳಾ),

ಮಾಜಿ ಸಚಿವ ಎ. ನಾರಾಯಣ ಸ್ವಾಮಿ (ಪರಿಶಿಷ್ಟ ಜಾತಿ), ಮಾಜಿ ಶಾಸಕ ಸೋಮಲಿಂಗಪ್ಪ (ಪರಿಶಿಷ್ಟ ಪಂಗಡ), ಮಾಜಿ ಶಾಸಕ ಅರಗ ಜ್ಞಾನೇಂದ್ರ (ರೈತ), ಡಾ.ಎನ್‌. ಎಫ್‌. ಮೋಹಿಸಿನ್‌ (ಅಲ್ಪಸಂಖ್ಯಾತ), ನಾಗೇಂದ್ರ

(ಸ್ಲಂ). ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ (ಪ್ರಶಿಕ್ಷಣ ಪ್ರಕೋಷ್ಠ), ಕೃಷ್ಣಾ ರೆಡ್ಡಿ (ಸಹಕಾರಿ ಪ್ರಕೋಷ್ಠ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry