ಸೋಮದೇವ್‌ಗೆ ಕಠಿಣ ಎದುರಾಳಿ

7

ಸೋಮದೇವ್‌ಗೆ ಕಠಿಣ ಎದುರಾಳಿ

Published:
Updated:

ಮೆಲ್ಬರ್ನ್‌ (ಪಿಟಿಐ): ಭರವಸೆಯ ಆಟಗಾರ ಸೋಮದೇವ್ ದೇವವರ್ಮ ನ್‌ಗೆ ಮುಂಬರುವ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ನಲ್ಲಿ ಕಠಿಣ ಸವಾಲು ಎದುರಾಗಿದೆ.ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ವಿಶ್ವ ರ್‍ಯಾಂಕ್‌ನಲ್ಲಿ 27 ನೇ ಸ್ಥಾನ ಹೊಂದಿರುವ ಸ್ಪೇನ್‌ನ ಫೆಲಿಸಿಯಾನೋ ಲೊಪೇಜ್‌ ಅವರ  ಜೊತೆ ಪೈಪೋಟಿ ನಡೆಸಬೇಕಿದೆ.ಸೋಮದೇವ್‌ ಈ ಟೂರ್ನಿಯಲ್ಲಿ ಒಮ್ಮೆಯೂ ಮೂರನೇ ಸುತ್ತಿಗೆ ಪ್ರವೇಶ ಪಡೆದಿಲ್ಲ. ಒಂದು ವೇಳೆ ಈ ಬಾರಿ ಅವರು ಮೂರನೇ ಸುತ್ತು ಪ್ರವೇಶಿಸಿದ್ದೇ ಆದರೆ ಬ್ರಿಟನ್‌ನ ಆ್ಯಂಡಿ ಮರ್ರೆ ಅವರ ಜೊತೆ ಸೆಣಸಾಟ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry