ಶುಕ್ರವಾರ, ಆಗಸ್ಟ್ 23, 2019
22 °C

ಸೋಮದೇವ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ

Published:
Updated:

ನವದೆಹಲಿ (ಪಿಟಿಐ): ಅಮೆರಿಕದಲ್ಲಿ ಇತ್ತೀಚಿಗೆ ನಡೆದ ಸಿಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಸಾಧನೆ ತೋರಿದ್ದ ಭಾರತದ ಸೋಮದೇವ್ ದೇವವರ್ಮನ್ ಎಟಿಪಿ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 14 ಸ್ಥಾನ ಏರಿಕೆ ಕಂಡು 115 ಸ್ಥಾನದಲ್ಲಿದ್ದಾರೆ.ಸೋಮದೇವ್ ಸಿಟಿ ಓಪನ್ ಟೂರ್ನಿಯ ಹದಿನಾರರ ಘಟ್ಟದಲ್ಲಿ ಅಮೆರಿಕದ ಜಾನ್ ಇಸ್ನೆರ್ ಕೈಯಲ್ಲಿ ಸೋತಿದ್ದರು. ಆದರೆ ಈ ಟೂರ್ನಿಯಿಂದ ಸೋಮದೇವ್ 55 ರ‍್ಯಾಂಕಿಂಗ್ ಪಾಯಿಂಟ್ ಗಳಿಸಿದ್ದರು.ಇನ್ನು, ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ಮಹೇಶ್ ಭೂಪತಿ ತಮ್ಮ ಸ್ಥಾನಗಳನ್ನು  ಮತ್ತಷ್ಟು ಭದ್ರ ಪಡಿಸಿಕೊಂಡಿದ್ದು, ಕ್ರಮವಾಗಿ  ಮೂರು ಹಾಗೂ ಏಳನೇ  ಸ್ಥಾನದಲ್ಲಿದ್ದಾರೆ. ಲಿಯಾಂಡರ್ ಪೇಸ್  ಒಂದು ಸ್ಥಾನ ಕುಸಿದು 10ನೇ ಸ್ಥಾನದಲ್ಲಿದ್ದಾರೆ.

ದಿವಿಜ್ ಶರಣ್ 72 ಸ್ಥಾನದಲ್ಲಿದ್ದರೆ ಪುರವ್ ರಾಜಾ ಎರಡು ಸ್ಥಾನ ಏರಿಕೆ  ಕಂಡು 86ನೇ ಕ್ರಮಾಂಕದಲ್ಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ 19ನೇ ಸ್ಥಾನವನ್ನೆ ಕಾಯ್ದುಕೊಂಡಿದ್ದಾರೆ.

Post Comments (+)