ಸೋಮಪ್ಪನ ಕೆರೆಗೆ ರಾಷ್ಟ್ರೀಯ ಪ.ಜಾ-ಪ.ಪಂ ಆಯೋಗ ಸದಸ್ಯರ ಭೇಟಿ

7

ಸೋಮಪ್ಪನ ಕೆರೆಗೆ ರಾಷ್ಟ್ರೀಯ ಪ.ಜಾ-ಪ.ಪಂ ಆಯೋಗ ಸದಸ್ಯರ ಭೇಟಿ

Published:
Updated:

ಕಂಪ್ಲಿ: ಸ್ಥಳೀಯ ಸೋಮಪ್ಪನ ಕೆರೆ ಅಂಗಳದಲ್ಲಿ ಅನೇಕ ವರ್ಷಗಳಿಂದ ವಾಸವಾಗಿರುವ 320 ಕುಟುಂಬಗಳ ತೆರವಿಗೆ ಜಿಲ್ಲಾಡಳಿತ ನಿರ್ಧರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗಗಳ ಸದಸ್ಯರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.ನಂತರ ಕೆರೆ ಏರಿಯಲ್ಲಿ ಜರುಗಿದ ಸಭೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸದಸ್ಯ ಎಂ. ಶಿವಣ್ಣ ಮಾತನಾಡಿ, ಕೆರೆ ಅಂಗಳದಲ್ಲಿ ವಾಸವಾಗಿರುವ 320 ಬಡ ಕುಟುಂಬ ಗಳನ್ನು ತೆರವು ಮಾಡಲು ಜಿಲ್ಲಾಡಳಿತ ನಿರ್ಧಾರ ಪ್ರಕಟಿಸಿದ ದಿನದಿಂದ ಈ ಎಲ್ಲಾ ಕುಟುಂಬಗಳು ಕಷ್ಟದಲ್ಲಿರುವುದು ಮನವರಿಕೆಯಾಗಿದೆ.

 

ಕೆರೆ ಅಂಗಳ ನಿವಾಸಿಗಳ ಸಮಗ್ರ ವರದಿಯನ್ನು ಈಗಾಗಲೇ ಕೂಲಂಕಷವಾಗಿ ಪರಿಶೀಲಿ ಸಿದ್ದೀನಿ. ತುಳಿತಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ಜನರ ರಕ್ಷಣೆ ಮಾಡುವುದೇ ಆಯೋಗದ ಉದ್ದೆೀಶ ವಾಗಿದ್ದು, ಈ ನಿಟ್ಟಿನಲ್ಲಿ ಸೋಮಪ್ಪನ ಕೆರೆ ಅಂಗಳ ನಿವಾಸಿಗಳ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.ಕರ್ನಾಟಕ ಉಸ್ತುವಾರಿ ನೋಡಿ ಕೊಳ್ಳುತ್ತಿರುವ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಸದಸ್ಯೆ ಕೆ. ಕಮಲಕುಮಾರಿ ಮಾತನಾಡಿ, ಕೆರೆ ಅಂಗಳ ನಿವಾಸಿಗಳ ನೋವು ತಮಗೆ ತಿಳಿದಿದ್ದು, ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ತಿಳಿಸಿದರು. ಕೆರೆ ಅಂಗಳದಲ್ಲಿಯೇ ವಾಸ ಮುಂದು ವರಿಕೆಗೆ ಪ್ರಮಾಣಿಕ ಪ್ರಯತ್ನ ಮುಂದುವರಿಸುವುದಾಗಿಯೂ ಭರವಸೆ ನೀಡಿದರು.ಸೋಮಪ್ಪನ ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವಿರಾಜಪೇಟೆ ಮಾಜಿ ಶಾಸಕ ಎಚ್.ಡಿ. ಬಸವರಾಜ ಮಾತನಾಡಿ, ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗಗಳ ಸದಸ್ಯರುಗಳು ನೀಡಿರುವ ಭರವಸೆಯಿಂದ ಕೆರೆ ನಿವಾಸಿಗಳು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಮಾನವೀಯತೆ ದೃಷ್ಟಿಯಿಂದ ಕೆರೆ ಅಂಗಳದಲ್ಲಿಯೇ ವಾಸ ಮುಂದುವರಿಸಲು ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಿದರು.ಕೆರೆ ಸಂಘದವರು ಎಸ್.ಸಿ, ಎಸ್.ಟಿ ಆಯೋಗದ ಸದಸ್ಯರನ್ನು ಸನ್ಮಾನಿಸಿದರು.

ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಉಪ ವಿಭಾಗಾಧಿಕಾರಿ ಕರೀಗೌಡ, ತಹಸೀಲ್ದಾರ್ ಪಿ.ಎಸ್. ಮಂಜುನಾಥ, ಉಪ ತಹಸೀಲ್ದಾರ್ ಶಿವರಾಜ್, ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ, ಅಧಿಕಾರಿಗಳಾದ ವಿ. ಎಸ್.ಸರೀಕರ್, ಡಾ. ಬಾಲಿ, ಇ. ವೆಂಕಟಯ್ಯ, ಸೋಮ ಪ್ಪನ ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಜಿ.ಜಿ. ಆನಂದಮೂರ್ತಿ, ಉಪಾಧ್ಯಕ್ಷ ಎನ್. ವೆಂಕಟೇಶ್, ಸಹ ಕಾರ್ಯದರ್ಶಿ ಎಂ. ಯಶೋದಮ್ಮ, ಹಂಪಿ .ವಿ.ವಿ ಬುಡಕಟ್ಟು ಅಧ್ಯಯನ ವಿಭಾಗ ಪ್ರಾಧ್ಯಾಪಕ ಡಾ.ಕೆ.ಎಂ. ಮೇತ್ರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಮಲ ಮರಿಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಮುಖಂಡ ಅರವಿ ಬಸವನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭೆ ಸದಸ್ಯರಾದ ಎಂ.ರಾಜೇಂದ್ರಕುಮಾರಸ್ವಾಮಿ, ಯು. ರಾಮದಾಸ, ಟಿ. ಅಮೀನಲಿ, ಡಿಸಿಸಿ ಸದಸ್ಯ ಎಂ. ಸುಧೀರ್, ಕಂಪ್ಲಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಹನುಮಂತ, ಉಪಾಧ್ಯಕ್ಷ ಬಿ. ನಾಗರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಬೀಬ್ ರೆಹಮಾನ್, ಜಿ. ರಾಜರಾವು, ಡಾ.ವಿ.ಎಲ್. ಬಾಬು, ಸೈಯ್ಯದ್ ಉಸ್ಮಾನ್, ಕಂಪ್ಲಿ ವಿಧಾನ ಸಭಾ ಕ್ಷೇತ್ರ ಕರವೇ ಅಧ್ಯಕ್ಷ ಎ. ರವೀಂದ್ರ, ಬೆಣಕಲ್ ಬಸವರಾಜ್ ಇತರರಿದ್ದರು.

ಭೇಟಿ: ಸೋಮಪ್ಪನ ಕೆರೆ ಅಂಗಳ ವೀಕ್ಷಣೆ ಮತ್ತು ಸಭೆ ನಂತರ ಕೆರೆ ಅಂಗಳ ನಿವಾಸಿಗಳಿಗಾಗಿ ವಿತರಿಸಲು ಉದ್ದೆೀಶಿ ಸಿರುವ ಚಿಕ್ಕಜಾಯಿಗನೂರು ರಸ್ತೆಯ ನಿವೇಶನ ಸ್ಥಳಕ್ಕೆ ಎಸ್.ಸಿ ಮತ್ತು ಎಸ್.ಟಿ ಆಯೋಗ ಸದಸ್ಯರು ವೀಕ್ಷಿಸಿದರು.ನಂದಿನಿ ಉತ್ಪನ್ನ ಮಾರಾಟ ಕೇಂದ್ರ ಆರಂಭ

ಬಳ್ಳಾರಿ:
ಸ್ಥಳೀಯ 13ನೇ ವಾರ್ಡ್ ವ್ಯಾಪ್ತಿಯ ಮಿಲ್ಲರ್ ಪೇಟೆಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಶಾಸಕ, ಕೆಎಂಎಫ್ ರಾಜ್ಯ ಘಟಕದ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಇತ್ತೀಚೆಗೆ ಉದ್ಘಾಟಿಸಿದರು. ವಿಮ್ಸ ಹಾಗೂ ರೈಲು ನಿಲ್ದಾಣದಲ್ಲಿ ಎರಡು ಕೇಂದ್ರಗಳಿದ್ದು, ಈ ಮೂಲಕ ನಗರದಲ್ಲಿ ಒಕ್ಕೂಟದ ಮೂರನೇ ಮಾರಾಟ ಕೇಂದ್ರವನ್ನು ಆರಂಭಿಸ ಲಾಗಿದೆ. ಈ ಮಾರಾಟ ಕೇಂದ್ರದಲ್ಲಿ ದಿನದ 24 ಗಂಟೆಯೂ ಸೇವೆ ದೊರೆಯ ಲಿದೆ. ಒಕ್ಕೂಟದ ಆವರಣದಲ್ಲಿ ರೂ 10 ಕೋಟಿ ವೆಚ್ಚದ ಐಸ್‌ಕ್ರೀಂ ತಯಾರಿಕಾ ಘಟಕ ಸ್ಥಾಪಿಸಲಾಗುವುದು. ಈ ತಿಂಗಳಿನ ಕೊನೆಯ ವಾರ ಗಾಂಧಿನಗರದಲ್ಲಿ ಗುಡ್ ಲೈಫ್ ಹಾಲು ಹಾಗೂ ಇತರೆ ವಸ್ತುಗಳ ಮಾರಾಟ ಮಳಿಗೆಯನ್ನು ಆರಂಭಿಸಲಾಗುವುದು. ಬೇಸಿಗೆಯಲ್ಲಿ ಜನರಿಗೆ ಉತ್ತಮ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಕೆ. ಬಸವರಾಜ್, ಮಲ್ಲನಗೌಡ, ಬಾದುಲ್ಲಾ, ರಾಯಚೂರು- ಬಳ್ಳಾರಿ- ಕೊಪ್ಪಳ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜನಾರ್ದನರೆಡ್ಡಿ ಉಪಸ್ಥಿತರಿದ್ದರು. ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು ಸ್ವಾಗತಿಸಿದರು. ಶ್ರೀಹರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry