ಗುರುವಾರ , ಮೇ 13, 2021
24 °C

ಸೋಮವಾರಪೇಟೆ ಆಸ್ಪತ್ರೆಗೆ ಅನಾರೋಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಮತ್ತು ಸುತ್ತಲಿನ ಕಾಫಿತೋಟದ ಕಾರ್ಮಿಕರು ಅವಲಂಬಿಸಿರುವ ಇಲ್ಲಿನ ಏಕೈಕ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅನೇಕ ಸಮಸ್ಯೆಗಳಿಂದ ನರಳುತ್ತಿದೆ.ಹೊರನೋಟಕ್ಕೆ ಇದೊಂದು ಹೈಟೆಕ್ ಆಸ್ಪತ್ರೆಯ ಕಟ್ಟಡದಂತೆ ಕಂಗೊಳಿಸಿದರೂ ಒಳಗೆ ಹೋದರೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುವುದು ಮಾತ್ರ ದುಸ್ತರ. ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಬವಣೆ ಪಡುವಂತಾಗಿದೆ. ಹಲವು ವರ್ಷಗಳಿಂ ದಲೂ ಈ ಆಸ್ಪತ್ರೆಯಲ್ಲಿ ಅನೇಕ ಕೊರತೆಗಳಿದ್ದರೂ ಪರಿಹಾರ ಒದಗಿಸಲು ಮಾತ್ರ ಯಾರೂ ಮುಂದಾಗಿಲ್ಲ. ಹಣ ವಂತರು ದೂರದ ಖಾಸಗಿ ಆಸ್ಪತ್ರೆ ಗಳನ್ನು ಅವಲಂಬಿಸಿದರೆ ಬಡರೋಗಿಗಳ ಪಾಡೇನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ತಾಲ್ಲೂಕಿನ ಬಡರೋಗಿಗಳು ಸಣ್ಣಪುಟ್ಟ ಖಾಯಿಲೆಗೂ ಮಡಿಕೇರಿಯ ಸರ್ಕಾರಿ ಜಿಲ್ಲಾಸ್ಪತ್ರೆ ಹಾಗೂ ಮೈಸೂರು, ಹಾಸನ ಮತ್ತು ಮಂಗಳೂ ರಿನ ಆಸ್ಪತ್ರೆಗಳನ್ನು ಅವಲಂಬಿಸ ಬೇಕಾಗಿದೆ. ಮಡಿಕೇರಿಯಲ್ಲಿಯೂ ತಜ್ಞ ವೈದ್ಯರಿಲ್ಲದ ಕಾರಣ ಬಡವರು ದೂರದ ನಗರ ಪ್ರದೇಶದ ಆಸ್ಪತ್ರೆಗಳನ್ನು ಎಡತಾಕಬೇಕಾಗಿದೆ.ಡಾ.ವೆಂಕಟೇಶ್ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿ ಕರ್ತವ್ಯದಲ್ಲಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಅಫಘಾತದಲ್ಲಿ ತೀವ್ರ ಗಾಯ ಗೊಂಡ ಪರಿಣಾಮವಾಗಿ ರಜೆಯಲ್ಲಿ ದ್ದಾರೆ. ಆದ್ದರಿಂದ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದ್ದು, ಸಂಬಂಧಿಸಿದ ಇಲಾಖೆಯ ಮೇಲಧಿ ಕಾರಿಗಳು ಪರ್ಯಾಯ ವ್ಯವಸ್ಥೆಯನ್ನೇ ಮಾಡಿಲ್ಲ ಎಂಬುದು ಸಾರ್ವಜನಿಕರ ದೂರು. 12 ಮಂದಿ ತಜ್ಞ ವೈದ್ಯರನ್ನು ಹೊಂದಿರಬೇಕಾದ ಈ ಆಸ್ಪತ್ರೆಯಲ್ಲಿ ಈಗಿರುವುದು ಕೇವಲ 2 ಮಂದಿ ಮಾತ್ರ. ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಮಕ್ಕಳ ತಜ್ಞ ಓ.ವಿ.ಕೃಷ್ಣಾನಂದ್, ಅರಿ ವಳಿಕೆ ತಜ್ಞರಾಗಿ ರವಿಕುಮಾರ್, ಹರಿಣಿ ಹಾಗೂ ಸುಪರ್ಣಾ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೂ ರಜೆಯ ಮೇಲೆ ಹೋದರೆ ರೋಗಿಗಳ ಸ್ಥಿತಿ ಇನ್ನಷ್ಟು ಶೋಚನೀಯವಾಗುತ್ತದೆ.ಎಕ್ಸ್‌ರೇ, ಸ್ಕ್ಯಾನಿಂಗ್, ಲ್ಯಾಬ್, ಆಪರೇಷನ್ ಥಿಯೇಟರ್ ಮುಂತಾದ ಆಧುನಿಕ ಸೌಲಭ್ಯಗಳಿಗೆ ಈ ಆಸ್ಪತ್ರೆ ಯಲ್ಲಿ ಕೊರತೆಯಿಲ್ಲ. ಆದರೆ ಇದನ್ನು ಉಪಯೋಗಿಸಬೇಕಾದ ಶಸ್ತ್ರಚಿಕಿತ್ಸಾ ತಜ್ಞರು, ಹೃದಯ ಖಾಯಿಲೆ ತಜ್ಞರು, ಮೂಳೆ ತಜ್ಞರು, ಕಣ್ಣಿನ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು ಹಾಗೂ ಚರ್ಮರೋಗ ತಜ್ಞ ವೈದ್ಯರ ಹುದ್ದೆಗಳು ಅನಾದಿ ಕಾಲದಿಂದಲೂ ಖಾಲಿಯಾಗಿಯೇ ಉಳಿದಿದೆ. ಹೀಗಾಗಿ ದುಬಾರಿ ಉಪಕರಣಗಳು ತುಕ್ಕು ಹಿಡಿದಿವೆ. ರೋಗಿಗಳ ಸಂಖ್ಯೆ ಹೆಚ್ಚಾ ದಂತೆ ತಜ್ಞವೈದ್ಯರ ಸಂಖ್ಯೆ ಕಡಿಮೆ ಯಾಗುತ್ತಿರುವುದು ಇಲ್ಲಿನ ವಿಪರ್ಯಾಸವಾಗಿದೆ.  130 ಹಾಸಿಗೆಗಳ ಆಸ್ಪತ್ರೆ ಇದಾ ಗಿದ್ದರೂ ಮಳೆಗಾಲದಲ್ಲಿ ಕಟ್ಟಡ ಅಲ್ಲಲ್ಲಿ ಸೋರುವುದು ಸಾಮಾನ್ಯ. 10 ಹಾಸಿಗೆ ಗಳಿರುವ ತುರ್ತು ಚಿಕಿತ್ಸಾ ಕೊಠಡಿಯ ಅಗತ್ಯವೂ ಇಲ್ಲಿದೆ. ಎರಡು ವರ್ಷಗಳ ಹಿಂದೆಯೇ ಇಲ್ಲಿನ ಆಡಳಿತಾಧಿಕಾರಿ ಸರ್ಕಾರಕ್ಕೆ ಕಟ್ಟಡದ ಅವಶ್ಯಕತೆ ಬಗ್ಗೆ ಪತ್ರ ಬರೆದಿದ್ದರೂ ಯಾವುದೇ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿಲ್ಲ.ಈ ಸರ್ಕಾರಿ ಆಸ್ಪತ್ರೆಗೆ ಹೊರ ಜಿಲ್ಲೆಗಳಿಂದ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ವೈದ್ಯರು ಮೂಲಸೌಲಭ್ಯವಿಲ್ಲದ ವಸತಿ ಗೃಹಗಳು ಇಲ್ಲವಾಗಿದೆ. ಇರುವ ವಸತಿ ಗೃಹಗಳು ಮನುಷ್ಯರು ವಾಸಿಸುವ ಸ್ಥಿತಿ ಯಲ್ಲಿಲ್ಲ. ಅವುಗಳು ಈಗಲೋ ಆಗಲೋ ಕುಸಿದು ಬೀಳುವಂತಿವೆ. ದಾದಿಯರ ವಸತಿಗೃಹಗಳೂ ವಾಸಿಸಲು ಯೋಗ್ಯವಾಗಿಲ್ಲ. ಇನ್ನು ಮುಂದಾದರೂ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ತಜ್ಞ ವೈದ್ಯರ ನೇಮಕಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕೆಂಬುದು ಸಾರ್ವಜನಿಕರು ಆಗ್ರಹಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.