ಸೋಮವಾರಪೇಟೆ: ಧಾರಾಕಾರ ಮಳೆ

7

ಸೋಮವಾರಪೇಟೆ: ಧಾರಾಕಾರ ಮಳೆ

Published:
Updated:

ಸೋಮವಾರಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ಕಳೆದ ಒಂದು ವಾರದಿಂದ ಸುಡುಬಿಸಿಲಿನ ವಾತಾವರಣವಿದ್ದು, ಶನಿವಾರ ಸುರಿದ ಮಳೆ ವಾತಾವರಣವನ್ನು ತಂಪಾಗಿಸಿದೆ.ಸೋಮವಾರಪೇಟೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಒಂದು ತಿಂಗಳಿ ನಿಂದ ಮಳೆ ಬೀಳದ ಕಾರಣ ಬತ್ತದ ಗದ್ದೆ ನೀರಿಲ್ಲದೆ ಒಣಗಿದ್ದವು. ಕೃಷಿಕರು ಆತಂಕದಲ್ಲಿದ್ದಾಗಲೇ ಮಳೆ ಸುರಿದಿ ರುವುದು ರೈತರಲ್ಲಿ ಹರ್ಷ ತಂದಿದೆ.ತಾಲ್ಲೂಕಿನ ಕಾಫಿ ಬೆಳೆಗಾರರು ತಮ್ಮ ತೋಟದ ಕಾಫಿ ಗಿಡಗಳಿಗೆ ರಾಸಾಯನಿಕ ಗೊಬ್ಬರವನ್ನು ಹಾಕಲು ಮಳೆಯನ್ನು ಕಾಯುತ್ತಿದ್ದ ಸಮಯದಲ್ಲಿ ಮಳೆ ಬಿದ್ದಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ.ಒಂದು ವಾರದಿಂದ ಸುಡುಬಿಸಿಲಿಗೆ ಕಾಫಿ ಗಿಡದ ಎಲೆಗಳು ಸುಟ್ಟು, ನೆಲಕ್ಕೆ ಬೀಳುತ್ತಿದ್ದವು. ವಾರಕ್ಕೊಮ್ಮೆ ಮಳೆ ಬೀಳುತ್ತಿದ್ದಾರೆ. ಕಾಫಿ ತೋಟಗಳು ಆರೋಗ್ಯವಾಗಿರುತ್ತವೆ ಎಂದು ಬೆಳೆಗಾರ ರೊಬ್ಬರು ಹೇಳಿದರು. ಶುಂಠಿ ಕೃಷಿಕ ರಿಗೂ ಮಳೆ ಹರ್ಷ ತಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry