ಶುಕ್ರವಾರ, ಏಪ್ರಿಲ್ 23, 2021
28 °C

ಸೋಮವಾರ ಸಿದ್ಧ ಉಡುಪು ಮಾರಾಟ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬ್ರಾಂಡೆಡ್ (ಜನಪ್ರಿಯ) ಸಿದ್ಧ ಉಡುಪುಗಳ ಮೇಲೆ ಕಡ್ಡಾಯವಾಗಿ ಶೇ 10ರಷ್ಟು  ಅಬಕಾರಿ ಸುಂಕ ವಿಧಿಸುವ ಪ್ರಸ್ತಾವ ಕೈಬಿಡಲು ಒತ್ತಾಯಿಸಿ ಸೋಮವಾರ ದೇಶದಾದ್ಯಂತ ವಹಿವಾಟು ಸ್ಥಗಿತಗೊಳಿಸಲು ಪ್ರಮುಖ ಚಿಲ್ಲರೆ ವ್ಯಾಪಾರಿ ಸಂಘಟನೆಗಳು ನಿರ್ಧರಿಸಿವೆ.ಜನಪ್ರಿಯ ಬ್ರಾಂಡ್‌ಗಳಾದ ಪ್ಯಾಂಟಲೂನ್ಸ್, ಶಾಪರ್ಸ್ ಸ್ಟಾಪ್, ವೆಸ್ಟ್‌ಸೈಡ್, ಲೈಫ್‌ಸ್ಟೈಲ್, ಮದುರಾ ಗಾರ್ಮೆಂಟ್ಸ್,ಅರವಿಂದ ಗಾರ್ಮೆಂಟ್ಸ್ ಸೇರಿದಂತೆ ಪ್ರಮುಖ ಚಿಲ್ಲರೆ ಸರಣಿ ವ್ಯಾಪಾರಿ ಮಳಿಗೆಗಳು  ಮತ್ತು ಸಣ್ಣ ಪ್ರಮಾಣದ ಚಿಲ್ಲರೆ ವಸ್ತ್ರ ವ್ಯಾಪಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರ ಚಿಲ್ಲರೆ ಮಾರಾಟ ಮಳಿಗೆಗಳು ಸೋಮವಾರ ಬಾಗಿಲು ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಈ ಮೊದಲಿನ ಐಚ್ಛಿಕ ಅಬಕಾರಿ ಸುಂಕ ಬದಲಿಗೆ ಕಡ್ಡಾಯವಾಗಿ ವಿಧಿಸುವುದರಿಂದ ಸಣ್ಣ ಪ್ರಮಾಣದ ಸಿದ್ಧ ಉಡುಪು ತಯಾರಕರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಸಿದ್ಧ ಉಡುಪು ತಯಾರಿಕಾ ಸಂಸ್ಥೆಗಳು ಟೀಕಿಸಿವೆ. ಸಿದ್ಧ ಉಡುಪು ತಯಾರಕರು, ರಫ್ತುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು  ಪ್ರತಿನಿಧಿಸುವ 20 ಸಾವಿರಕ್ಕೂ ಹೆಚ್ಚು ಸಂಸ್ಥೆಗಳ ಸದಸ್ಯತ್ವ ಹೊಂದಿರುವ ಭಾರತೀಯ ವಸ್ತ್ರ ತಯಾರಕರ ಸಂಘದ (ಸಿಎಂಎಐ) ಪ್ರತಿನಿಧಿಗಳು, ಕಂದಾಯ ಕಾರ್ಯದರ್ಶಿ ಸುನಿಲ್ ಮಿತ್ರಾ ಅವರನ್ನು ಭೇಟಿಯಾಗಿ, ಉದ್ದೇಶಿತ  ಅಬಕಾರಿ ಸುಂಕ ರದ್ದುಪಡಿಸಲು ಮನವಿ ಸಲ್ಲಿಸಿದ್ದಾರೆ. ದೇಶದ  ಸಿದ್ಧ ಉಡುಪುಗಳ ವಾರ್ಷಿಕ ವಹಿವಾಟು ಅಂದಾಜು ್ಙ 1 ಲಕ್ಷ ಕೋಟಿಗಳಷ್ಟಿದ್ದು, 50 ಸಾವಿರದಷ್ಟು ಇರುವ  ಬ್ರಾಂಡೆಡ್ ವಸ್ತ್ರಗಳಿಂದ ್ಙ 60 ಸಾವಿರ ಕೋಟಿಗಳಷ್ಟು ವಹಿವಾಟು ನಡೆಯುತ್ತಿದೆ.  ಸರ್ಕಾರದ ನಿರ್ಧಾರ ಪ್ರತಿಭಟಿಸಿ ಶುಕ್ರವಾರ ದೇಶದಾದ್ಯಂತ 50 ಸಾವಿರದಷ್ಟು ಸಿದ್ಧ ಉಡುಪು ತಯಾರಿಕಾ ಘಟಕಗಳೂ ಕಾರ್ಯನಿರ್ವಹಿಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.