ಸೋಮವಾರ, ಮೇ 17, 2021
27 °C

ಸೋಮವಾರ, 2-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದುದ್ದೇಶ, ಸುವಿಚಾರಗಳ ಪ್ರತಿಪಾದನೆಗೆ ಕರೆನವದೆಹಲಿ, ಏ. 1- `ಜಾತೀಯತೆಯು ಗತಕಾಲದಲ್ಲಿ ಸಮರ್ಥನೀಯವಾಗಿರಬಹುದು, ಇಂದು ಖಂಡಿತ ಸಮರ್ಥನೀಯವಲ್ಲ, ಸಾಮಾಜಿಕ ಕೆಡುಕಾಗಿದ್ದ ಜಾತೀಯತೆ ಇಂದು ರಾಜಕೀಯ ಆಡಳಿತ ಕ್ಷೇತ್ರ ಪ್ರವೇಶಿಸಿದೆ.ಮತ ನೀಡುವವರ ಜಾತಿಗನುಗುಣವಾಗಿ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವೆವು, ಮತ ಬೇಡುವೆವು. ಜಾತೀಯತೆ, ಕೋಮುವಾರು ಭಾವನೆಗಳೇ ರಾಷ್ಟ್ರೀಯ ಐಕ್ಯತೆಗೆ ಮಾರಕ ಶಕ್ತಿಗಳಾಗಿವೆ~ ಎಂದು ಉಪರಾಷ್ಟ್ರಪತಿ ಡಾ. ರಾಧಾಕೃಷ್ಣನ್ ತಿಳಿಸಿದರು.ವಾಯುಸೇನೆಯ 29ನೇ ವಾರ್ಷಿಕೋತ್ಸವ ಆಚರಣೆಬೆಂಗಳೂರು, ಏ. 1- ಇಂದಿಗೆ ಇಪ್ಪತ್ತೊಂಬತ್ತು ವರ್ಷದ ಪ್ರಾಯಕ್ಕೆ ಬಂದ ಭಾರತದ ವಾಯುಸೇನೆಯ ವಾರ್ಷಿಕೋತ್ಸವದ ಎರಡು ವಾರಗಳ ಕಾರ್ಯಕ್ರಮವು ಇಂದು ಬೆಳಿಗ್ಗೆ ಜಾಲಹಳ್ಳಿಯಲ್ಲಿ ನಡೆದ ಚಾಕಚಕ್ಯತೆಯ ಪರೇಡ್‌ನಿಂದ ಆರಂಭವಾಯಿತು.

 

ಟ್ರೈನಿಂಗ್ ಕಮಾಂಡ್ ಹೆಡ್ ಕ್ವಾರ್ಟ್ರಸ್ ಆಶ್ರಯದಲ್ಲಿ ನಡೆಯುತ್ತಿರುವ ಉತ್ಸವವು ಭಾರತದಾದ್ಯಂತ ನಡೆಯುವ ಉತ್ಸವದ ಅಂಗವಾಗಿ ಆರಂಭವಾಗಿದೆ.

ಏರ್ ವೈಸ್‌ಮಾರ್ಷಲ್ ಎಸ್.ಎನ್ ಗೋಯಲ್ ಅವರು ಪರೇಡ್‌ನಲ್ಲಿ ವಂದನೆ ಸ್ವೀಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.