ಸೋಮವಾರ 22-10-1962

7

ಸೋಮವಾರ 22-10-1962

Published:
Updated:

ಗಡಿ ಠಾಣ್ಯಗಳ ಪತನ

ನವದೆಹಲಿ, ಅ. 21- ಚೀಣ-ಭಾರತ ಗಡಿಯಲ್ಲಿರುವ ಭಾರತದ ಸ್ಥಾನಗಳ ಮೇಲೆ ನಿನ್ನೆ ಭಾರಿ ದಾಳಿ ಆರಂಭಿಸಿದ ಚೀಣೀಯರು ಇಂದು ದಾಳಿಯನ್ನು ಸಾಕಷ್ಟು ಬಲವಾಗಿ ಮುಂದುವರಿಸಿ, ನೀಫ ಪ್ರದೇಶದಲ್ಲಿ ನಾಮ್ಕಚು ನದಿಯ ಇನ್ನಷ್ಟು ದಕ್ಷಿಣಕ್ಕೆ ಮುನ್ನಡೆದಿದ್ದಾರೆಂದು ರಕ್ಷಣಾ ಸಚಿವ  ವಿ.ಕೆ. ಕೃಷ್ಣಮೆನನ್‌ರವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.ಗೃಹ ಸಚಿವ ಶಾಸ್ತ್ರಿ ಕರೆ

ಆಳ್ವಾರ್, ಅ. 21- “ಉತ್ತರದ ಗಡಿಯಲ್ಲಿ ಆಕ್ರಮಣವನ್ನು ತೆರವು ಮಾಡಲು ನಡೆದಿರುವ ಹೋರಾಟದಲ್ಲಿ ಅದೃಷ್ಟದ ಏರಿಳಿತಗಳು ಹೇಗೇ ಇದ್ದರೂ ನಮ್ಮ ದೇಶದ ಪ್ರತಿ ಅಂಗುಲ ಭೂಮಿಯಿಂದಲೂ ಆಕ್ರಮಣಕಾರರನ್ನು ಓಡಿಸಲು ನಾವು ಬದ್ಧ ಕಂಕಣರಾಗಿದ್ದೇವೆ” ಎಂದು ಕೇಂದ್ರ ಸರ್ಕಾರದ ಗೃಹ ಸಚಿವರಾದ ಶ್ರೀ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಇಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry