ಭಾನುವಾರ, ಜನವರಿ 19, 2020
20 °C

ಸೋಮವಾರ, 23–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ–ಚೀಣ ವಿವಾದದ ಶಾಂತಿಯುತ ಇತ್ಯರ್ಥಕ್ಕೆ ನಾಸೆರ್–ಚೌ ಆಸಕ್ತಿ

ಕೈರೊ, ಡಿ. 22– ಭಾರತ–ಚೀಣ ಗಡಿ ವಿವಾದದ ಶಾಂತಿಯುತ ಇತ್ಯರ್ಥಕ್ಕೆ ಪ್ರಯತ್ನಿಸುವ ತಮ್ಮ ಆಕಾಂಕ್ಷೆಯನ್ನು ಅಧ್ಯಕ್ಷ ನಾಸೆರ್‌ ಮತ್ತು ಚೀಣಿ ಪ್ರಧಾನಿ ಚೌ ಎನ್‌ ಲಾಯ್‌ ಇಬ್ಬರೂ ವ್ಯಕ್ತಪಡಿಸಿ­ದ್ದಾರೆ. ಈ ದಿಸೆಯಲ್ಲಿ ಕೊಲಂಬೊ ಸಮ್ಮೇಳನದ ಶಾಂತಿಯುತ ಪ್ರಯತ್ನ­ಗಳಿಗೆ ಬೆಂಬಲ ನೀಡಲು ತಮ್ಮ ನಿರ್ಧಾ­ರ­ವನ್ನು ಇಬ್ಬರು ನಾಯಕರೂ ವ್ಯಕ್ತಪಡಿಸಿದ್ದಾರೆ.ಗೋವಾ ಸ್ಥಾನಮಾನ ಬದಲಾಗದು: ಮತ್ತೆ ನೆಹರೂ ಸ್ಪಷ್ಟನೆ

ನವದೆಹಲಿ, ಡಿ. 22– ಗೋವಾದ ಸ್ಥಾನ­ಮಾನವನ್ನು ಈಗಿರುವಂತೆಯೇ ಮುಂದು­ವರಿಸುವ ಸರ್ಕಾರದ ನೀತಿ­ಯನ್ನು ಪ್ರಧಾನಮಂತ್ರಿ ನೆಹರೂ ಇಂದು ಕಾಂಗ್ರೆಸ್‌ ಪಾರ್ಲಿಮೆಂಟರಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪುನಃ ಪ್ರತಿಪಾದಿಸಿದರೆಂದು ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)