ಸೋಮವಾರ, 23-7-1962

ಶುಕ್ರವಾರ, ಜೂಲೈ 19, 2019
26 °C

ಸೋಮವಾರ, 23-7-1962

Published:
Updated:

ಭಾರತೀಯ ಸೈನಿಕರ ಮೇಲೆ ಚೀಣೀ ದಾಳಿ

ನವದೆಹಲಿ, ಜುಲೈ 22-
ಗಾಲ್ವನ್ ಕಣಿವೆಯಲ್ಲಿರುವ ಭಾರತೀಯ ಠಾಣ್ಯವೊಂದನ್ನು ಸುತ್ತುವರಿದು ಕಳೆದ ಹತ್ತು ದಿನಗಳಿಂದ ಬಿಕ್ಕಟ್ಟಿನ ಪರಿಸ್ಥಿತಿವುಂಟು ಮಾಡಿರುವ ಚೀಣೀಯರು, ಲಡಖ್‌ನಲ್ಲಿ ಇತರ ಎರಡು ಕಡೆಗಳಲ್ಲಿ ನಿನ್ನೆ ಮಧ್ಯಾಹ್ನ ಭಾರತೀಯ ಗಡಿ ಕಾವಲುಗಾರರ ಮೇಲೆ ಗುಂಡು ಹಾರಿಸಿದರು.ರಷ್ಯ: ಅಣ್ವಸ್ತ್ರ ಸ್ಫೋಟ ಆರಂಭ

ಮಾಸ್ಕೊ, ಜುಲೈ 22
- ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕವು ಇತ್ತೀಚೆಗೆ ನಡೆಸಿದ ನ್ಯೂಕ್ಲಿಯರ್ ಪರೀಕ್ಷಾ ಪ್ರಯೋಗ ಮಾಲೆಗೆ ಪ್ರತಿಯಾಗಿ ತನ್ನ ಇತ್ತೀಚಿನ ನ್ಯೂಕ್ಲಿಯರ್ ಅಸ್ತ್ರ ಪರೀಕ್ಷಾ ಪ್ರಯೋಗವನ್ನು ರಷ್ಯವೂ ನಡೆಸಲಿದೆ.ಗೂಡ್ಸ್- ಮೇಲ್ ಗಾಡಿಗಳ ಡಿಕ್ಕಿ: 48 ಜನರ ಸಾವು

ಪಾಟ್ನ, ಜುಲೈ 22
- ಪೂರ್ವ ರೈಲ್ವೆಯ ಮೇನ್ ಲೈನ್‌ನಲ್ಲಿರುವ ದುಮ್ರಾವ್ ನಿಲ್ದಾಣದಲ್ಲಿ ನಿಂತಿದ್ದ ಗುಡ್ಸ್ ರೈಲೊಂದಕ್ಕೆ 6 ಡೌನ್ ಅಮೃತ್‌ಸರ-ಹೌರಾ ಮೇಲ್ ನಿನ್ನೆ ರಾತ್ರಿ 9.50 ರಲ್ಲಿ ಡಿಕ್ಕಿ ಹೊಡೆದು 48 ಮಂದಿ ಸತ್ತಿರುವರೆಂದು ಇಲ್ಲಿನ ಪೂರ್ವ ರೈಲ್ವೆಯ ಕೇಂದ್ರ ಕಚೇರಿಗೆ ಅಧಿಕಾರಯುತವಾದ ಸುದ್ದಿ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry