ಭಾನುವಾರ, ಏಪ್ರಿಲ್ 18, 2021
23 °C

ಸೋಮವಾರ, 6-8-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾತಾವರಣದಲ್ಲಿ ರಷ್ಯ ಅಣುಸ್ಫೋಟ

ಉಪ್ಪಾಲ, ಆ. 5- ಸೋವಿಯತ್ ಒಕ್ಕೂಟವು ಇಂದು ವಾತಾವರಣದಲ್ಲಿ ಎರಡನೆಯ ಅತ್ಯಂತ ದೊಡ್ಡ (40,000,000 ಟನ್ ಟಿ.ಎನ್.ಟಿ. ಶಕ್ತಿಯ) ನ್ಯೂಕ್ಲಿಯರ್ ಬಾಂಬ್ ಸ್ಫೋಟ ನಡೆಸಿತೆಂದು ಇಲ್ಲಿನ ಭೂಕಂಪನ ಶಾಸ್ತ್ರಶಾಲೆಯು ವರದಿ ಮಾಡಿದೆ.ಜಪಾನಿನ ಹಿರೋಷಿಮಾ ನಗರದ ಮೇಲೆ ಮೊದಲ ಅಣುಬಾಂಬ್ ಹಾಕಿದ 17 ವರ್ಷಗಳಿಗೆ ಸರಿಯಾಗಿ, ಅದಕ್ಕಿಂತ 2000 ಪಟ್ಟು ಹೆಚ್ಚು ಶಕ್ತಿಯುತವಾದ (40 ಮೆಗಾಟನ್ ಶಕ್ತಿಯ) ಈ ಎರಡನೆ ಭಾರಿ ಆಸ್ಫೋಟನೆ ನಡೆದಿದೆ.ನಟಿ ಮೆರಿಲಿನ್ ಮನ್ರೋ ನಿಧನ

ಲಾಸ್ ಏಂಜಲೀಸ್, ಆ. 5- ವಿಖ್ಯಾತ ಅಮೆರಿಕನ್ ಸಿನಿಮಾ ನಟಿ ಮೆರಿಲಿನ್ ಮನ್ರೋ ನಿದ್ರಾ ಗುಳಿಗೆಗಳನ್ನು ಹೆಚ್ಚು ಸೇವಿಸಿದ ಪರಿಣಾಮವಾಗಿ ಇಂದು ಮುಂಜಾನೆ 3-40ಕ್ಕೆ (ಸ್ಥಳೀಯ ವೇಳೆ) ನಿಧನ ಹೊಂದಿದಳು.ಇಲ್ಲಿನ ಹೊರವಲಯದಲ್ಲಿರುವ ಬ್ರೆಂಟ್‌ವುಡ್‌ನ ತನ್ನ ನಿವಾಸದಲ್ಲಿ ಈಕೆ ಮೃತಳಾದಳೆಂದು ಪ್ರಕಟಿಸಲಾಗಿದೆ.ಅನಾಥ ಬಾಲಿಕೆಯಾಗಿದ್ದು, ಹಾಲಿವುಡ್ ಚಿತ್ರ ಜಗತ್ತಿನ ಆಧುನಿಕ “ಪ್ರೇಮದೇವತೆಯ” ಪಟ್ಟಕ್ಕೇರಿದ 36 ವರ್ಷ ವಯಸ್ಸಿನ ಮೆರಿಲಿನ್ ಮನ್ರೋ ತನ್ನ ಹಾಸಿಗೆಯಲ್ಲಿ ಮಲಗಿದ್ದಂತೆ ಮೃತಳಾಗಿದ್ದಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.