ಶುಕ್ರವಾರ, ನವೆಂಬರ್ 15, 2019
27 °C

ಸೋಮವಾರ, 8-4-1963

Published:
Updated:

ಭಾರತದ ನೌಕಾಪಡೆಗೆ ಸಬ್‌ಮೆರೀನ್‌ಗಳು (`ಪ್ರಜಾವಾಣಿ'ಗೆ ಪ್ರತ್ಯೇಕ)

ನವದೆಹಲಿ, ಏ. 7- ಭಾರತದ ನೌಕಾ ಪಡೆಗೆ ಪ್ರಪ್ರಥಮ ಸಬ್‌ಮೆರೀನ್ ಶೀಘ್ರದಲ್ಲಿಯೇ ಬರುವ ಸಂಭವವಿದೆಯೆಂದು ಇಲ್ಲಿ ಖಚಿತವಾಗಿ ತಿಳಿದುಬಂದಿದೆ.ಇತ್ತೀಚೆಗೆ ಹಿಂದೂಸಾಗರದಲ್ಲಿ ಚೀಣಿ ಸಬ್‌ಮೆರೀನ್‌ದೆಂದು ಭಾವಿಸಲಾದ ಯಾನ ಚಿಹ್ನೆಗಳನ್ನು ಭಾರತದ ನೌಕಾಪಡೆಯ ನೌಕೆಗಳು ಇತ್ತೀಚೆಗೆ ಪತ್ತೆ ಮಾಡಿದವೆಂದು ತಿಳಿದುಬಂದಿದೆ.ಮೇ ತಿಂಗಳಲ್ಲಿ ಮಲಪ್ರಭಾ ಶಂಕುಸ್ಥಾಪನೆ

ಬೆಂಗಳೂರು, ಏ. 7- ಮೇ ತಿಂಗಳಿನಲ್ಲಿ ಕೇಂದ್ರದ ನೀರಾವರಿ ಸಚಿವ ಶ್ರೀ ಹನೀಫ್ ಮಹಮದ್ ಇಬ್ರಾಹಿಂ ಅವರು ಮಲಪ್ರಭಾ ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸುವರು.ಮೇ ತಿಂಗಳಿನಲ್ಲಿ ಈ ಕಾರ್ಯವನ್ನು ಮಾಡಲು ರಾಜ್ಯಕ್ಕೆ ಆಗಮಿಸಬೇಕೆಂದು ತಾವು ನೀರಾವರಿ ಸಚಿವರನ್ನು ಆಹ್ವಾನಿಸಿರುವುದಾಗಿ ಇಂದು ದೆಹಲಿಯಿಂದ ಹಿಂದಿರುಗಿದ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ವರದಿಗಾರರಿಗೆ ತಿಳಿಸಿದರು.ಕಾಶ್ಮೀರದ ಬಗ್ಗೆ ರೋಸ್ರೋವರು ಸಲಹೆ ತಂದಿಲ್ಲ:

ಡಾಕಾ, ಏ. 7- ಅಧ್ಯಕ್ಷ ಕೆನೆಡಿಯವರ ವಿಶೇಷ ರಾಯಭಾರಿ ವಾಲ್ಟರ್ ರೋಸ್ರೋವರು ಕಾಶ್ಮೀರದ ಬಗ್ಗೆ ಯಾವ ನಿರ್ದಿಷ್ಟ ಸಲಹೆಯನ್ನು ತಂದಿಲ್ಲವೆಂದು ಪಾಕಿಸ್ತಾನದ ಅಧ್ಯಕ್ಷ ಅಯೂಬ್‌ಖಾನರು ಇಂದು ಇಲ್ಲಿ ತಿಳಿಸಿದರು.

ಪ್ರತಿಕ್ರಿಯಿಸಿ (+)