ಸೋಮವಾರ, 9-9-1963

7

ಸೋಮವಾರ, 9-9-1963

Published:
Updated:

ಅಧಿಕಾರಿಗಳ ವಾಪಸಿಗೆ ಒತ್ತಾಯ

ಕರಾಚಿ, ಸೆ. 8- ಇಲ್ಲಿರುವ ಭಾರತೀಯ ಹೈಕಮಿಷನ್‌ನ ವೈಮಾನಿಕ ವಿಷಯಗಳ ಸಲಹೆಗಾರ ವಿಂಗ್ ಕಮ್ಯಾಂಡರ್ ಪಿ.ಬಿ. ಪವಾರ್ ಮತ್ತು ಇತರ ಮೂವರು ಅಧಿಕಾರಿಗಳನ್ನು ತಕ್ಷಣ ಭಾರತಕ್ಕೆ ವಾಪಸು ಕರೆಸಿಕೊಳ್ಳಬೇಕೆಂದು ಪಾಕಿಸ್ತಾನ್ ಸರಕಾರ ಒತ್ತಾಯ ಮಾಡಿದೆ.ಇವರುಗಳು ಭಾರಿ ಪ್ರಮಾಣದಲ್ಲಿ ಯೋಜಿತ ಗೂಢಚರ್ಯೆ ನಡೆಸುತ್ತಿದ್ದರೆಂಬ ಕಾರಣದಿಂದ ಅವರ ವಾಪಸಿಗೆ ಒತ್ತಾಯ ಮಾಡಲಾಗಿದೆಯೆಂದು ಅಧಿಕೃತವಾಗಿ ತಿಳಿಸಲಾಗಿದೆ.

ಶ್ರವಣಬೆಳಗೊಳದಲ್ಲಿ  ಪ್ರವಾಸಿ ನಿಲಯ ನಿರ್ಮಾಣ

ಮೈಸೂರು, ಸೆ. 8- ಪ್ರಖ್ಯಾತ ಯಾತ್ರಾ ಕೇಂದ್ರವಾದ ಶ್ರವಣಬೆಳಗೊಳನಲ್ಲಿ 200 ಕೊಠಡಿಗಳುಳ್ಳ “ಗೋಮಟ ಮಹಲ್‌” ಪ್ರವಾಸಿ ಮಂದಿರ ಒಂದನ್ನು ನಿರ್ಮಾಣ ಮಾಡಲಾಗುವುದೆಂದು ರೆವಿನ್ಯೂ ಸಚಿವ ಶ್ರೀ ಎಂ.ವಿ. ಕೃಷ್ಣಪ್ಪನವರು ಇಂದು ಇಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry