ಸೋಮಾಲಿಯಾ ಕಡಲಲ್ಲಿ ಹಡಗು ಮುಳುಗಿ 55 ನಿರಾಶ್ರಿತರು ನಾಪತ್ತೆ

7

ಸೋಮಾಲಿಯಾ ಕಡಲಲ್ಲಿ ಹಡಗು ಮುಳುಗಿ 55 ನಿರಾಶ್ರಿತರು ನಾಪತ್ತೆ

Published:
Updated:

ನೈರೋಬಿ(ಎಪಿ): ಸೋಮಾಲಿಯಾ ಕಡಲಿನಲ್ಲಿ ಹಡಗೊಂದು ಮುಳುಗಿದ ಪರಿಣಾಮವಾಗಿ ಅದರಲ್ಲಿದ್ದ 55 ನಿರಾಶ್ರಿತರು ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ತಿಳಿಸಿದೆ.2011ರ ನಂತರ ಸಂಭವಿಸಿದ 2ನೇ ದೊಡ್ಡ ದುರಂತ ಇದಾಗಿದೆ. ಯೆಮೆನ್ ದೇಶದತ್ತ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಹಡಗು ಇದಾಗಿದ್ದು, ಸ್ವಲ್ಪ ದೂರ ಕ್ರಮಿಸಿದ ನಂತರ ಮಗುಚಿದೆ. ಹೆಚ್ಚಿನ ಜನರು ಹಡಗಿನಲ್ಲಿದ್ದುದೇ ಮುಳುಗಲು ಕಾರಣ ಎನ್ನಲಾಗಿದೆ.ದುರಂತದಲ್ಲಿ ಐವರು ಬದುಕುಳಿದಿದ್ದು, 23 ದೇಹಗಳನ್ನು ಹೊರ ತೆಗೆಯಲಾಗಿದೆ. 55 ಮಂದಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry