ಸೋಮಾಲಿಯಾ: ಕಾರ್ ಬಾಂಬ್ ದಾಳಿ: 55 ಸಾವು

7

ಸೋಮಾಲಿಯಾ: ಕಾರ್ ಬಾಂಬ್ ದಾಳಿ: 55 ಸಾವು

Published:
Updated:

ಮೊಗಡಿಶು (ಐಎಎನ್ಎಸ್, ಎಪಿ): ಸೋಮಾಲಿಯಾ ರಾಜಧಾನಿ ಮೊಗಡಿಶುವಿನಲ್ಲಿ ಮಂಗಳವಾರ ಶಿಕ್ಷಣ ಸಚಿವಾಲಯ ಕಟ್ಟಡವನ್ನು ಗುರಿಯಿಟ್ಟು ನಡೆಸಿದ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 55 ಜನ ಮೃತರಾಗಿ ಇತರ 30 ಮಂದಿ ಗಾಯಗೊಂಡಿದ್ದಾರೆ.

ಶಿಕ್ಷಣ ಸಚಿವಾಲಯದ ಮುಂಭಾಗದಲ್ಲಿ ಕಾರಿನಲ್ಲಿ ಇರಿಸಲಾಗಿದ್ದ ಸ್ಫೋಟಕಗಳು ಸ್ಫೋಟಗೊಂಡು ಈ ದುರಂತ ಸಂಭವಿಸಿತು ಎಂದು ಮೊಗಡಿಶು ಆಂಬುಲೆನ್ಸ್ ಸೇವೆಯ ಮುಖ್ಯಸ್ಥ ಅಲಿ ಮ್ಯೂಸ್ ತಿಳಿಸಿದ್ದಾರೆ.ವಾಹನ ಸಚಿವಾಲಯದ ಮುಂಭಾಗಕ್ಕೆ ಬಂದು ನಿಂತ ಮರುಘಳಿಗೆಯಲ್ಲೇ ಈ ಸ್ಫೋಟ ಸಂಭವಿಸಿತು ಎಂದು ಪೊಲೀಸ್ ಅಧಿಕಾರಿ ಅಲಿ ಹುಸೇನ್ ನುಡಿದರು.ಅಲ್ ಖೈದಾ ಜೊತೆಗೆ ಸಂಪರ್ಕ ಹೊಂದಿರುವ ಉಗ್ರಗಾಮೀ ಸಂಘಟನೆ ಅಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತಿರುವುದಾಗಿ ಗುಂಪಿನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry