ಬುಧವಾರ, ಜೂನ್ 23, 2021
24 °C

ಸೋಮೇಶ್ವರ ರಥ: ಮಹಿಳೆಯರ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮೇಶ್ವರ ರಥ: ಮಹಿಳೆಯರ ಸಾರಥ್ಯ

ಕೋಲಾರ: ನಗರದ ಕೋಟೆ ಬಡಾವಣೆಯಲ್ಲಿ ಶುಕ್ರವಾರ ನಡೆದ ಸೋಮೇಶ್ವರ ರಥೋತ್ಸವದಲ್ಲಿ ನೂರಾರು ಮಹಿಳೆಯರು ರಥ ಎಳೆದು ಹರಕೆ ತೀರಿಸಿದರು. ಹತ್ತಾರು ವರ್ಷಗಳಿಂದ ರಥೋತ್ಸವದಲ್ಲಿ ಮಹಿಳೆಯರೇ ಪ್ರಮುಖ ಪಾತ್ರ ವಹಿಸುತ್ತಿರುವುದು ವಿಶೇಷ.ಮಧ್ಯಾಹ್ನ 2 ಗಂಟೆ ವೇಳೆಗೆ ರಥೋತ್ಸವ ಆರಂಭವಾಗುವುದಕ್ಕೂ ಮುಂಚೆ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲೆ ರಥದ ಮುಂದೆ ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಕೋಟೆ ಬಡಾವಣೆಯಷ್ಟೆ ಅಲ್ಲದೆ, ನಗರದ ವಿವಿಧ ಬಡಾವಣೆಗಳು ಮತ್ತು ಗ್ರಾಮಗಳ ಮಹಿಳೆಯರೂ ನೆರೆದಿದ್ದರು. ಕಾಲೇಜು ವಿದ್ಯಾರ್ಥಿನಿಯರೂ ಕೂಡ ಗಮನ ಸೆಳೆದರು.ಎರಡು ಗಂಟೆ ವೇಳೆಗೆ ರಥೋತ್ಸವ ಆರಂಭವಾದಾಗ ನೆರೆದ ಮಹಿಳೆಯರು ಓಂ ನಮಃ ಶಿವಾಯ ಮಂತ್ರವನ್ನು ಜೋರು ದನಿಯಲ್ಲಿ ಹೇಳುತ್ತಾ ರಥ ಎಳೆದರು. ಸ್ವಲ್ಪ ದೂರ ಬರುತ್ತಿದ್ದಂತೆ ರಥ ಎಳೆಯುತ್ತಿದ್ದ ಮಹಿಳೆಯರ ನಡುವೆ ನೂಕಾಟ ಏರ್ಪಟ್ಟು ಕೆಲವು ಮಹಿಳೆಯರು ಕೆಳಗೆ ಬಿದ್ದರು. ಕೂಡಲೇ ಪೊಲೀಸರು ಮತ್ತು ಸಂಘಟಕರು ಮಧ್ಯಪ್ರವೇಶಿಸಿ ಸಾಲನ್ನು ನಿಯಂತ್ರಿಸಿದರು.ದೇವಾಲಯದ ಮುಂಭಾಗದಿಂದ ಆರಂಭವಾದ ರಥೋತ್ಸವ ಉಪ ಕಾರಾಗೃಹ ರಸ್ತೆಯಲ್ಲಿ ಮುಂದುವರಿದು ಕಾಲೇಜು ವೃತ್ತ, ದೊಡ್ಡಪೇಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂಜೆ ವೇಳೆಗೆ ಮತ್ತೆ ದೇವಾಲಯ ಆವರಣ ತಲುಪಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.