ಮಂಗಳವಾರ, ಏಪ್ರಿಲ್ 20, 2021
29 °C

ಸೋಯಾಗೆ ರೋಗ: ಹೆಚ್ಚಿದ ರೈತರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ತಾಲ್ಲೂಕಿನ ಕೆಲವಡೆ ಸೋಯಾಗೆ ಎಲೆ ತಿನ್ನುವ ಹುಳು ಕಾಟ ಸೇರಿದಂತೆ ಕೆಲ ರೋಗದ ಬಾಧೆಯಿಂದ ರೈತರು ಆತಂಕಗೊಂಡಿದ್ದಾರೆ.ಈ ಸಲ ಬಂಪರ್ ಇಳುವರಿ ನಿರೀಕ್ಷೆಯಲ್ಲಿರುವ ರೈತರಿಗೆ ಸೋಯಾಗೆ ಕಾಣಿಸಿಕೊಂಡ ರೋಗದಿಂದ ಕೊಂಚ ನಿರಾಶೆಯಾಗುವಂತೆ ಮಾಡಿದೆ. ರೈತರ ದೂರಿನ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ಗುರುವಾರ ರೈತ ಮಲ್ಲಿಕಾರ್ಜುನ ಶೆಟಕಾರ ಅವರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಪೋಷಕಾಂಶ ಕೊರತೆಯಿಂದ ಸಸಿಗಳು ಹಳದಿ ಬಣ್ಣದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಸಾಕಷ್ಟು ಕಡೆ ಎಲೆ ತಿನ್ನುವ ಹುಳುಗಳ ಕಾಟ ಇರುವ ಬಗ್ಗೆ ರೈತರು ತಿಳಿಸಿದ್ದಾರೆ. ಕೆಲ ರೈತರು ಔಷಧ ಮತ್ತು ದ್ರವ ರೂಪದ ಗೊಬ್ಬರ ಮಿಶ್ರಣ ಮಾಡಿ ಸಿಂಪರಣೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ರೀತಿ ಮಾಡಿದರೆ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಹೀಗಾಗಿ ರೈತರು ಔಷದ ಮತ್ತು ಗೊಬ್ಬರ ಪ್ರತ್ಯೇಕವಾಗಿ ಸಿಂಪರಣೆ ಮಾಡುವಂತೆ ಸಲಹೆ ನೀಡಿದರು.ರೋಗ ಬಾಧೆಗೆ ಒಳಗಾದ ಕೆಲ ದಂಟುಗಳು (ಶ್ಯಾಂಪಲ್) ಬೀದರ್ ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವರಿಂದ ಮಾಹಿತಿ ಬಂದ ನಂತರ ರೋಗ ಬಾಧೆ ನಿಯಂತ್ರಣಕ್ಕಾಗಿ ಸಲಹೆ ನೀಡಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತಂಕಗೊಳ್ಳದೆ ಅಂಥ ಯಾವುದೇ ಸಮಸ್ಯೆ ಎದುರಾದರೆ ಕೃಷಿ ಇಲಾಖೆ ಇಲ್ಲವೇ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.ತಾಲ್ಲೂಕಿನಲ್ಲಿ ಈ ಬಾರಿ ಸಮಯಾನುಸಾರ ಮಳೆಯಾಗಿ ಹೊಲಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಮಳೆ ನಿಗದಿತ ಸಮಯದಲ್ಲಿ ಪ್ರವೇಶ ಮಾಡಿದ ಕಾರಣ ಜೂನ್ ತಿಂಗಳಲ್ಲಿ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ.ತಾಲ್ಲೂಕಿನಲ್ಲಿ ಈ ಬಾರಿ 86297 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 30 ಸಾವಿರ ಹೆಕ್ಟೇರ್ ಸೋಯಾ, 17 ಸಾವಿರ ಹೆಕ್ಟೇರ್ ಜೋಳ, 16 ಸಾವಿರ ಹೆಕ್ಟೇರ್ ತೊಗರಿ, 8 ಸಾವಿರ ಹೆಕ್ಟೇರ್ ಉದ್ದು, 6 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.