ಸೋಮವಾರ, ಮೇ 17, 2021
28 °C

ಸೋಯಾ ಬಿತ್ತನೆಯತ್ತ ರೈತರ ಚಿತ್ತ

ಪ್ರಜಾವಾಣಿ ವಾರ್ತೆ/- ವೀರೇಶ್.ಎನ್.ಮಠಪತಿ Updated:

ಅಕ್ಷರ ಗಾತ್ರ : | |

ಚಿಟಗುಪ್ಪಾ: ಈ ಬಾರಿಯ ಮುಂಗಾರು ಹಂಗಾಮು ಆರಂಭವಾದಾಗಿನಿಂದ ವೃತ್ತದೆಲ್ಲೆಡೆ ಹೆಚ್ಚಾಗಿ ರೈತರು ಸೋಯಾ ಬಿತ್ತನೆ ನಡೆಸುತ್ತಿರುವುದು ಕಂಡುಬರುತ್ತಿದೆ.ಉದ್ದು, ಹೆಸರು ರೈತರಿಗೆ ಬೇಸರದ ಬೆಳೆಗಳಾಗಿದ್ದು, ಖಾದ್ಯತೈಲ, ದ್ವಿದಳ ಧಾನ್ಯ ಆಗಿರುವ ಸೋಯಾ ಸದ್ಯಕ್ಕೆ ರೈತರ ಪಾಲಿಗೆ ವಾಣಿಜ್ಯ ಬೆಳೆಯಾಗಿ ಪರಿಣಮಿಸಿದೆ.ಅಧಿಕ ಇಳುವರಿ, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸೋಯಾ ಬೆಳೆಗೆ ಸಿಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬಿತ್ತನೆಗೆ ಮುಂದಾಗಿರುವುದಾಗಿ ರೈತರಾದ ಬಸಪ್ಪ, ಗೋವಿಂದಪ್ಪ, ಶಂಕರರಾವ ಮತ್ತಿತರರು `ಪ್ರಜಾವಾಣಿ' ಗೆ ತಿಳಿಸಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಶೇ 75 ರಷ್ಟು ಅಧಿಕ ಪ್ರಮಾಣದಲ್ಲಿ ರೈತರು ಸೋಯಾ ಬೀಜ ಕೊಂಡುಕೊಂಡಿದ್ದಾರೆ ನಿರ್ಣಾ ರೈತ ಸಂಪರ್ಕ ಕೇಂದ್ರದಲ್ಲಿ ಇದುವರೆಗೂ 580.5 ಕ್ವಿಂಟಲ್ ಸೋಯಾ ಬೀಜಗಳ ಮಾರಾಟ ಆಗಿದ್ದು, ಖುಷ್ಕಿ ಭೂಮಿಯಲ್ಲಿಯೂ ಸೋಯಾ ಇಳುವರಿ ಅಧಿಕ ಪ್ರಮಾಣದಲ್ಲಿ ಬರುವುದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬಿತ್ತನೆಗೆ ಮುಂದಾಗಿದ್ದಾರೆ ಎಂದು ಕೃಷಿ ಅಧಿಕಾರಿ ಶಾಂತವೀರ ಲೆವಡಿಗಾರ ತಿಳಿಸುತ್ತಾರೆ.ಚಿಟಗುಪ್ಪಾ ರೈತ ಸಂಪರ್ಕ ಕೇಂದ್ರದಲ್ಲಿ 979.50 ಕ್ವಿಂಟಲ್, ಬೇಮಳಖೇಡಾ, ಮನ್ನಾಏಖ್ಖೇಳಿ ರೈತ ಸಂಪರ್ಕ ಕೇಂದ್ರಗಳಲ್ಲಿ 1624 ಕ್ವಿಂಟಲ್ ಸೋಯಾ ಬೀಜಗಳು ಇದುವರೆಗೂ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಸೋಯಾ ಬೀಜ ಕೊಂಡುಕೊಂಡಿದ್ದಾರೆ.ಇತರ ಬೆಳೆಗಳಿಗೆ ಹೋಲಿಸಿದಲ್ಲಿ ರೈತರಿಗೆ ಹೆಚ್ಚು ಇಳುವರಿ, ಅಧಿಕ ಲಾಭ ಕೊಡುವ ಬೆಳೆಯಾಗಿದ್ದು, ಈ ಭಾಗದ ವಾತಾವರಣಕ್ಕೂ ಸೂಕ್ತ ಬೆಳೆ ಆಗಿರುವುದರಿಂದ ರೈತರು ಸೋಯಾ ಬಿತ್ತನೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಕೃಷಿ ಅಧಿಕಾರಿಗಳಾದ ಕಾಶಿನಾಥ ಧೋತ್ರೆ, ರಮೇಶ ಸಿಳಕೆ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.