ಸೋಯಾ ಬೆಳೆ ನಾಶ: ರೈತ ಕಂಗಾಲು

7

ಸೋಯಾ ಬೆಳೆ ನಾಶ: ರೈತ ಕಂಗಾಲು

Published:
Updated:
ಸೋಯಾ ಬೆಳೆ ನಾಶ: ರೈತ ಕಂಗಾಲು

ಔರಾದ್: ಆಂಧ್ರ ಮೂಲದ ಕಂಪೆನಿಯೊಂದರ ಕ್ವಿನಾಲ್‌ಫಾಸ್ ಕೀಟ ನಾಶಕ ಸಿಂಪರಣೆಯಿಂದ ತಾಲ್ಲೂಕಿನ ರೈತನೊಬ್ಬನ ಏಳು ಎಕರೆ ಸೋಯಾ ಮತ್ತು ಉದ್ದು ನಾಶವಾದ ಸಂಗತಿ ಬೆಳಕಿಗೆ ಬಂದಿದೆ.ಈ ಕುರಿತು ಹಾನಿಗೊಳಗಾದ ತೇಗಂಪುರ ಗ್ರಾಮದ ರೈತ ಮಲ್ಲಿಕಾರ್ಜುನ ಸನ್ಮೂಖಪ್ಪ ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. ನನ್ನ 7.23 ಎಕರೆ ಜಮೀನಿನಲ್ಲಿ ಹೂ ಕಾಯಿ ಆಡುವ ಹಂತದಲ್ಲಿರುವ ಸೋಯಾ ಮತ್ತು ಉದ್ದು ಬೆಳೆಗೆ ಎಂ. ಕ್ವಿನಾಲಾಫಾಸ್ ಕೀಟ ನಾಶಕ ಸಿಂಪಡಿಸಿದ ಮರುದಿನವೇ ಕಂದು ಬಣ್ಣಕ್ಕೆ ತಿರುಗಿದೆ.ಇದರಿಂದಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆಸಿದ ಬೆಳೆ ಹಾನಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಪಟ್ಟಣದ ಔಷಧ ಅಂಗಡಿವೊಂದರಲ್ಲಿ ಖರೀದಿಸಿದ ಕೀಟ ನಾಶಕದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹಾನಿ ಮಾಡಿದ ಕಂಪೆನಿ ವಿರುದ್ಧ ಕ್ರಮ ಕೈಗೊಂಡು ನನಗೆ ಸೂಕ್ತ ಪರಿಹಾರ ಕೊಡಿಸುವಂತೆ ರೈತ ಮಲ್ಲಿಕಾರ್ಜುನ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry