ಸೋಮವಾರ, ಜನವರಿ 20, 2020
26 °C

ಸೋಲಾಪುರ: ಅದ್ದೂರಿ ಸಿದ್ಧರಾಮ ದೇವರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲಾಪುರ: ಅದ್ದೂರಿ ಸಿದ್ಧರಾಮ ದೇವರ ಜಾತ್ರೆ

ಸೋಲಾಪುರ: ಇಲ್ಲಿನ ಸಿದ್ಧರಾಮ ದೇವರ ಜಾತ್ರಾಮಹೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. ಅಕ್ಷತೆ ಕಾರ್ಯಕ್ರಮದಲ್ಲಿ ಭಾರಿ ಭಕ್ತಸ್ತೋಮ, ಕರ್ನಾಟಕ, ಆಂಧ್ರ ಮುಂತಾದ ನೆರೆಯ ರಾಜ್ಯಗಳಿಂದ ಆಗಮಿಸಿದ ಭಕ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.ಜಾತ್ರೆಯ ಅಂಗವಾಗಿ ನಂದಿ ಧ್ವಜಗಳ ಮೆರವಣಿಗೆ ನಡೆಯಿತು. ಕೇಂದ್ರ ಸಚಿವ ಸುಶೀಲ್ ಕುಮಾರ ಶಿಂಧೆ ಉತ್ತರ ಕಸಬಾ ಗಲ್ಲಿಯ ಮಲ್ಲಿಕಾರ್ಜುನ ಮಂದಿರದಲ್ಲಿದ್ದ ನಂದಿಧ್ವಜಗಳಿಗೆ ಹಾಗೂ ಉಜ್ವಲಾ ಶಿಂಧೆ ಹಿರೇಹಬ್ಬು ಮನೆತನದ ನಂದಿಧ್ವಜಗಳಿಗೆ  ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಹಿಂದಿನ ದಿನ  ಸ್ವತ: ಸಿದ್ದೇಶ್ವರರೇ ಸ್ಥಾಪಿಸಿದ 68 ಲಿಂಗಗಳಿಗೆ ಎಣ್ಣೆ ಮಜ್ಜನ (ತೈಲಾಭಿಷೇಕ) ವಿಧಿ ವಿಧಾನಗಳು ನಡೆದವು.ಮೆರವಣಿಗೆ ಸಮ್ಮತಿ ಕಟ್ಟೆಗೆ ಆಗಮಿಸಿದ ಬಳಿಕ ಸಿದ್ಧರಾಮನ ಯೋಗದಂಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.  ಮಾನಕರಿ ಶಿವಾನಂದ ಹಿರೇಹಬ್ಬು ಅಕ್ಷತೆ ಕಾರ್ಯಕ್ರಮ ನಡೆಸಿದರು. ದೇವಸ್ಥಾನ ಸಮಿತಿಯ ಮೇಘರಾಜ ಕಾಡಾದಿ, ಧರ್ಮರಾಜ ಕಾಡಾದಿ, ಶಾಸಕರಾದ ಸಿದ್ರಾಮಪ್ಪ ಪಾಟೀಲ, ದಿಲೀಪ ಮಾನೆ, ಶಾಸಕಿ ಪ್ರಣತಿ ಶಿಂಧೆ, ವಿಜಯ ದೇಶಮುಖ, ಮಹಾಪೌರ  ಆರೀಫ್ ಶೇಖ್, ಜಿಲ್ಲಾ ಪಂಚಾಯಿತಿಯ ಆನಂಧ  ತಾನವಾಡೆ, ರುದ್ರೇಶ ಮಾಳಗೆ, ನಂದಕುಮಾರ ಮುಸ್ತಾರೆ, ವಿಶ್ವನಾಥ ಅಳಗೆ, ಗುಂಡಪ್ಪ ಕಾರಬಾರಿ, ಕಾಶೀನಾಥ ದರ್ಗೋಪಾಟೀಲ, ಮಾಜಿ ಶಾಸಕ ವಿಶ್ವನಾಥ ಜಾಕೋತೆ, ರಾಜಶೇಖರ ಶಿವಧಾರೆ, ಜಿಲ್ಲಾಧಿಕಾರಿ ಗೋಕುಲ ಮವಾರೆ, ಪೊಲೀಸ್ ಆಯುಕ್ತ ಹಿಮ್ಮತರಾವ ದೇಶಭಾೃತರ, ಸಂಗಪ್ಪ ಕೆಂಗನಾಳ, ತುಕಾರಾಮ ಕಾಸಾರ ಮುಂತಾದವರು ಪಾಲ್ಗೊಂದಿದ್ದರು.ಸರ್ವ ಲಿಂಗಗಳಿಗೆ ತೈಲಾಭಿಷೇಕ, ಮುಂಬೈನ ಜಾಂಝಾ ಪಥಕ, ಕರ್ನಾಟಕದ ದಾವಣಗೆರೆಯ  ಡೋಲುತಂಡ, ಇಂಡಿಯ ಚಿಟ್ಟಹಲಿಗೆ ಮೇಳ,ಸಂಸ್ಕಾರ ಭಾರತಿ ತಂಡದ ರಂಗೋಲಿ, ಆನೆ-ಒಂಟೆಗಳ ಸಾಲು ಮೆರವಣಿಗೆ ಶೋಭೆ ತಂದವು.

ಪ್ರತಿಕ್ರಿಯಿಸಿ (+)