ಸೋಲಾರ್ ದೀಪ ಬಳಕೆ ಮಾದರಿ ಕಾರ್ಯ

7

ಸೋಲಾರ್ ದೀಪ ಬಳಕೆ ಮಾದರಿ ಕಾರ್ಯ

Published:
Updated:

ಸಾಲಿಗ್ರಾಮ: ಪ್ರಕೃತಿ ವಿಕೋಪದಿಂದ ವಿದ್ಯುತ್ ತಯಾರಿಸಲು ಕಷ್ಟವಾಗುತ್ತಿರುವ ಈ ದಿನಗಳಲ್ಲಿ ಕೆ.ಆರ್.ನಗರ  ತಾಲ್ಲೂಕಿನ ಸೋಮನಹಳ್ಳಿ ಕಾಲೊನಿಯ ಜನರು ತಮ್ಮ ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದು ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜನಾರ್ದನಯ್ಯ ಹೇಳಿದರು.ಸೋಮನಹಳ್ಳಿ ಗ್ರಾಮದಲ್ಲಿ ಅಳವಡಿಸಲಾದ ಸೋಲಾರ್ ದೀಪಗಳನ್ನು ಈಚೆಗೆ ಉದ್ಟಾಟನೆ ಮಾಡಿ ಮಾತ      ನಾಡಿದ ಅವರು, ಪ್ರತಿ ಯಾಂದು ಸೌಲಭ್ಯವನ್ನು ಸರ್ಕಾರವೇ ನೀಡಬೇಕು ಎಂಬ ಮನೋಭಾವನೆ ಕೈಬಿಡಬೇಕು. ಸ್ವಂತ ವೆಚ್ಚದಲ್ಲಿ ಸಾಧ್ಯವಾಗುವ ಎಲ್ಲ ಸೌಲಭ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಸೋಮನಹಳ್ಳಿ ಗ್ರಾಮಸ್ಥರು ವಿಷಪೂರಿತ ರಸಗೊಬ್ಬರವನ್ನು ಬಳಸುವುದನ್ನು ಬಿಟ್ಟು ಸಾವಯವ ಕೃಷಿ ಮಾಡಲು ಮುಂದಾಗಿರುವುದೂ ಶ್ಲಾಘನೀಯ. ಈಗ ಸಂಪೂರ್ಣ ಸೋಲಾರ್ ದೀಪ ಬಳಸುವ ಮೂಲಕ ಗ್ರಾಮಸ್ಥರು ಮಾದರಿಯಾಗಿದ್ದಾರೆ ಎಂದರು.`ಇಕ್ರಾ~ ಸಂಸ್ಥೆಯ ಮುಖ್ಯಸ್ಥ ಸತ್ಯಶಂಕರ್ ಮಾತನಾಡಿ, ರೈತರ ಮನ ಪರಿವರ್ತನೆಯಿಂದ ಈ ಗ್ರಾಮ ವಿಷಮುಕ್ತ ಗ್ರಾಮವಾಗಿ ಹೊರ ಹೊಮ್ಮಿದೆ. ಇಲ್ಲದಿದ್ದರೆ ವಿಷಪೂರಿತ ರಸಗೊಬ್ಬರ ದಿಂದ ಬೆಳೆ ತೆಗೆದು ಅದನ್ನು ಸೇವನೆ ಮಾಡುವ ಸ್ಥಿತಿ ಎದುರಾಗುತ್ತಿತ್ತು ಎಂದರು.ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಜಿ.ಎಲ್. ವೆಂಕಟೇಶ್, ಸ್ಥಳೀಯ ಶಾಖೆಯ ವ್ಯವಸ್ಥಾಪಕ ಬಿ.ಎಲ್. ನಾಗೇಂದ್ರಪ್ಪ, ಸಿಡಿಪಿಒ ಬೆಟ್ಟೇಗೌಡ, ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನೀಫ್‌ಗೌಡ, ಪಶುವೈದ್ಯ ಹರೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry